ಅಲ್ ಬಿರ್ರ್ ಕಿಡ್ಸ್ ಫೆಸ್ಟ್: ಸಂಘಟಕ - ರಕ್ಷಕರ ಸಭೆ

ಮೂಡುಬಿದಿರೆ, ಡಿ.18: ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿ ಕಾರ್ಯಾಚರಿಸುವ ಅಲ್ ಬಿರ್ರ್ ಶಾಲೆಗಳ ದ.ಕ. ಝೋನ್ ಮಟ್ಟದ ಕಿಡ್ಸ್ ಫೆಸ್ಟ್ 2025-26ರ ಪೂರ್ವತಯಾರಿಯ ಭಾಗವಾಗಿ ಸಂಘಟಕ ಹಾಗೂ ರಕ್ಷಕರ ಸಭೆಯು ಮೂಡುಬಿದಿರೆಯ ಅಜುಮ್ ಅಲ್ ಬಿರ್ರ‌್ ಇಂಟರ್‌ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಅಲ್ ಬಿರ್ರ್ ದ.ಕ. ಜಿಲ್ಲಾ ಸಂಯೋಜಕ ಅಬ್ದುಲ್ ಶುಕೂರ್ ದಾರಿಮಿ ಕರಾಯ ಅಧ್ಯಕ್ಷತೆ ವಹಿಸಿದ್ದರು. ಫಾಝಿಯ್ ಫೈಝಿ ಲಾಡಿ ದುಆಗೈದರು. ಅಲ್ ಬಿರ್ರ‌್ ವಿದ್ಯಾರ್ಥಿ ಝೈನುಲ್ ಅಬಿದೀನ್ ಕಿರಾಅತ್ ಪಠಿಸಿದರು. ಮೂಡಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಸಲಾಂ ಬೂಟ್ ಬಝಾರ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನವಾಝ್ ವಯತ್ತಲ ಭಾಗವಹಿಸಿದ್ದರು.
ಮೂಡುಬಿದಿರೆ ಅಜುಮ್ ಅಲ್ ಬಿರ್ರ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಾಲಿಕ್, ಮಜೀದ್ ಹಾಜಿ ಸಿತಾರ್ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಬೂಟ್‌ಬಝಾರ್, ಜನರಲ್ ಕನ್ವೀನರಾಗಿ ಅಬ್ದುಲ್ ರಝಾಕ್ ಮದನಿ, ಕೋಶಾಧಿಕಾರಿಯಾಗಿ ಅಶ್ರಫ್ ಮರೋಡಿ ಆಯ್ಕೆಯಾದರು.
ಸಭೆಯಲ್ಲಿ ಹಾಫಿಝ್ ಅನ್ಸಾರಿ, ಅಹ್ಮದ್ ಹುಸೇನ್ ಲಾಡಿ, ಅಲ್ತಾಫ್ ಲೊರೊಟ್ಟೆಪದವು, ಎಸ್ಕೆಎಸ್ಸೆಸ್ಸೆಫ್ ವಲಯಾ ಧ್ಯಕ್ಷ ಅಬ್ದುಲ್ ರಝಾಕ್ ಮದನಿ, ಟೌನ್ ಮಸೀದಿಯ ಮುಹಮ್ಮದ್ ನದೀಮ್, ಎ.ಆರ್. ಭಕ್ಷಿ ಮೂಡುಬಿದಿರ್ರೆ, ಅಜುಮ್ ಅಲ್ ಬಿರ್ರ‌್ ಮ್ಯಾನೇಜ್ಮೆಂಟ್ ಟ್ರಸ್ಟಿಗಳಾದ ಅಲ್ತಾಫ್ ಗಂಟಲ್‌ಕಟ್ಟೆ, ರಝಾಕ್ ಸಚ್ಚರಿಪೇಟೆ, ಶಮೀಮುಲ್ಲಾ ಅಳಿಯೂರು, ಶಾಲೆಯ ಪ್ರಾಂಶುಪಾಲೆ ಶಾಹೀನಾ, ಗಪೂರ್ ಕೋಟೆಬಾಗಿಲು, ಲಿಯಾಖತ್ ಅಲಿ, ಅಬ್ದುಲ್ ಹಮೀದ್ ವಾಲ್ಪಾಡಿ, ಪಿ.ಎಚ್. ಹೈದರ್, ಸಫ್ವಾನ್ ಹಮೀದ್ ಉಪಸ್ಥಿತರಿದ್ದರು.
ಅಲ್ ಬಿರ್ರ್ ಶಿಕ್ಷಕ ಸಫ್ವಾನ್ ಬಾಖವಿ ಮಾಪಾಲ್ ಸ್ವಾಗತಿಸಿ, ವಂದಿಸಿದರು.







