ರಾಷ್ಟ್ರ ಮಟ್ಟದ ಸ್ಪರ್ಧೆ: ಫೇ ಕಾರ್ವಾಲೊಗೆ ಚಿನ್ನದ ಪದಕ

ಮಂಗಳೂರು,ಡಿ.18; ಗೋವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಗ್ರಾಪ್ಲಿಂಗ್ ವಿಭಾಗದಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿದ್ದ ಮಂಗಳೂ ರಿನ ಗೌಂಡ್ ಬಾರ್ನ್ ಫೈಟ್ ಕ್ಲಬ್ ಆ್ಯಂಡ್ ಫಿಟ್‌ನೆಸ್ ಜಿಮ್‌ನ ಫೇ ಕಾರ್ವಾಲೊ 60 ಕೆಜಿ ವಿಭಾಗದಲ್ಲಿ ಅಬುದಾಭಿ ಕಾಂಬಾಟ್ ಕ್ಲಬ್ (ಎಡಿಸಿಸಿ) ಪ್ರಾಯೋಜಿಸಿದ್ದ ಪಂದ್ಯದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಅವರು ಗೌಂಡ್ ಬಾರ್ನ್ ಫೈಟ್ ಕ್ಲಬ್ ಆ್ಯಂಡ್ ಫಿಟ್‌ನೆಸ್ ಜಿಮ್‌ನ ಮುಖ್ಯ ತರಬೇತುದಾರ ಶಿಶಿರ್ ಪೂಜಾರಿ ಹಾಗೂ ತರಬೇತುದಾರ ರೋಶನ್ ಡಿಕುನ್ಹ ಅವರಿಂದ ತರಬೇತಿ ಪಡೆದಿರುತ್ತಾರೆ.
Next Story





