ವೇಣೂರಿನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ

ವೇಣೂರು: ‘ಯೇಸು ಸ್ವಾಮಿ ಬೋಧಿಸಿದ ಪ್ರೀತಿ,ಕರುಣೆ,ಕ್ಷಮೆಮತ್ತು ಮಾನವೀಯತೆಯನ್ನುನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ವೇಣೂರು ಚರ್ಚಿನ ಧರ್ಮಗುರುಗಳಾದ ವಂ।ಫಾ. ಎಡ್ವಿನ್ ಸಂತೋಷ್ ಮೋನಿಸ್ ಹೇಳಿದರು.
ಅವರು ವೇಣೂರಿನಲ್ಲಿ ಜರಗಿದ ಕ್ರಿಸ್ಮಸ್ ಸೌಹಾರ್ದ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕ ಶ್ರೀ ಅರವಿಂದ ಚೊಕ್ಕಾಡಿ, ಸ್ಥಳೀಯ ಮಸೀದಿ ಖತೀಬರಾದ ಮುಹಮ್ಮದ್ ಜೌಹರ್ ಅಹ್ಸನಿ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಕಾಶಿನಾಥ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಭಾಗವಹಿಸಿದ್ದರು.
ಚರ್ಚ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರ ಸ್ವಾಗತಿಸಿದರು. ಕಾರ್ಯದರ್ಶಿ ಜೆತ್ರುದ್ ಡಿ ಸೋಜ ವಂದಿಸಿದರು. ಶಿಕ್ಷಕ ವಿನೋದ್ ಮೋನಿಸ್ ಅವರು ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಕೆಥೋಲಿಕ್ ಸಭಾ ಅಧ್ಯಕ್ಷ ಅರುಣ್ ಡಿ ಸೋಜ, ಐಸಿವೈಎಂ ಅಧ್ಯಕ್ಷೆ ಕು।ಜೆಸ್ವಿನ್ ಲೋಬೊ, ಚರ್ಚಿನ ಮಾಜಿ ಉಪಾಧ್ಯಕ್ಷರಾದ ಎಲ್ ಜೆ ಫೆರ್ನಾಂಡಿಸ್ ಮತ್ತು ಥಾಮಸ್ ರೆಮಿ ನೊರೋನ್ಹ ಸಹಕರಿಸಿದರು.





