ಎದುರುಪದವು ಮಸೀದಿ-ಮದ್ರಸದ ವತಿಯಿಂದ ಸಹೋದರತ್ವದ ಸಮಾಗಮ

ಮಂಗಳೂರು, ಡಿ.31: ಮೂಡುಶೆಡ್ಡೆ-ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ವತಿಯಿಂದ ಸಹೋದರತ್ವದ ಸಮಾಗಮ-2025 ಕಾರ್ಯಕ್ರಮವು ಕುಪ್ಪೆಪದವಿನ ಮಾಝರಾ ಗಾರ್ಡನ್‌ನಲ್ಲಿ ನೇರವೇರಿತು.
ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಇನ್ಫಾರ್ಮೆಟ್ ಫೌಂಡೇಶನ್ (ರಿ) ಕರ್ನಾಟಕ ಸಂಸ್ಥಾಪಕ ಅಬ್ದುಲ್ ಖಾದರ್ ನಾವೂರ್ ವಿದ್ಯಾರ್ಥಿಗಳ ಜೀವನ ಮತ್ತು ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಕೂಟ, ಮನೋರಂಜನಾ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.
ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ಅಧ್ಯಕ್ಷ ಇಕ್ಬಾಲ್ ಎಪಿ., ಉಪಾಧ್ಯಕ್ಷರಾದ ರಝಾಕ್ ಎಆರ್, ಸದರ್ ಉಸ್ತಾದ್ ಜುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಕಾರ್ಯದರ್ಶಿ ಸಜುದ್ದೀನ್, ಜೊತೆ ಕಾರ್ಯದರ್ಶಿ ಆರೀಫ್, ಬದ್ರಿಯಾ ಯಂಗ್‌ಮೆನ್ಸ್ ಸದಸ್ಯ ಆಶಿಕ್, ಎಸ್ಕೆಎಸ್‌ಬಿವಿ ಅಧ್ಯಕ್ಷ ಮುಹಮ್ಮದ್ ಅನಸ್, ಆಡಳಿತ ಮಂಡಳಿಯ ಸದಸ್ಯರಾದ ಮನ್ಸೂರ್, ಇಕ್ಬಾಲ್, ಮಾಜಿ ಅಧ್ಯಕ್ಷ ಸೈಫುದ್ದೀನ್, ಮಾಜಿ ಸದಸ್ಯರಾದ ಇಕ್ಬಾಲ್ ಸಿಎಚ್, ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.







