ವಲ್ಲಿ ವಗ್ಗರಿಗೆ ಕವಿತಾ ಟ್ರಸ್ಟ್‌ನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ

ಮಂಗಳೂರು: ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿಯು ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿಸೋಜರಿಗೆ ಲಭಿಸಿದೆ. ಪ್ರಶಸ್ತಿಯು 25,000 ರೂ., ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಜ.11ರಂದು ನಗರದ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯುವ 20ನೇ ಕವಿತಾ ಫೆಸ್ತ್ ಉತ್ಸವದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಣ್ಣ ಕಥೆಗಾರ ದಾಮೋದರ್ ಮಾವ್ಜೊ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕೊಂಕಣಿ ಕುಟಮ್ ಬಾಹ್ರೇನ್ ಪ್ರಶಸ್ತಿ, ದಾಯ್ಜಿ ದುಬಾಯ್ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ವಲ್ಲಿ ವಗ್ಗ ಭಾಜನರಾಗಿದ್ದಾರೆ.
Next Story





