ಮಲಾರ್ ಅರಸ್ತಾನ: ಸಮಸ್ತ ಆದರ್ಶ ಸಮ್ಮೇಳನ

ಕೊಣಾಜೆ, ಜ.3: ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ವತಿಯಿಂದ ಸಮಸ್ತ 100ನೇ ವಾರ್ಷಿಕೋತ್ಸವ ಅಂತರಾಷ್ಟ್ರೀಯ ಸಮ್ಮೆಳನದ ಪ್ರಚಾರಾರ್ಥವಾಗಿ ಸಮಸ್ತ ಆದರ್ಶ ಸಮ್ಮೇಳನವು ಶುಕ್ರವಾರ ಮಸೀದಿಯ ವಠಾರದಲ್ಲಿ ನಡೆಯಿತು.
ಜಮಾಅತಿನ ಖತೀಬ್ ಮುಹಮ್ಮದ್ ಶಫೀಕ್ ಕೌಸರಿ ಶಂಸುಲ್ ಉಲಮಾ ಮೌಲಿದ್ ಪಾರಾಯಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಸಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಅನುಗ್ರಹ ಭಾಷಣಗೈದರು. ಅಬ್ದುಲ್ ಹಮೀದ್ ಫೈಝಿ ಅಂಬಲಕಡವು ಮುಖ್ಯ ಪ್ರಭಾಷಣ ಮಾಡಿದರು.
ಜಮಾಅತಿನ ಅಧ್ಯಕ್ಷ ಎಂ.ಪಿ. ಅಬ್ದುರ‌್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಶರೀಫ್ ಪಟ್ಟೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತಿನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಬಿ. ಸ್ವಾಗತಿಸಿದರು.
ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಶಹೀರ್ ಕೌಸರಿ, ಮುಅಲ್ಲಿಮರಾದ ಶಂಸುದ್ದೀನ್ ಹನೀಫಿ ಮಾರ್ದಾಲ, ಉವೈಸ್ ಮದನಿ, ಜಮಾಅತ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು, ಹಾಮದ್ ಅಲ್ತಾಫ್, ಜಮಾಅತ್‌ನ ಉಪಾಧ್ಯಕ್ಷ ಯಹ್ಯಾ, ಕೋಶಾಧಿಕಾರಿ ಮಿಸ್ಬಾಹ್ ಮುನ್ನ, ಕಾರ್ಯದರ್ಶಿ ರಿಝ್ವಾನ್, ಸಮದ್ ಜಿ., ಸಮದ್ ಕೆ.ಎಂ, ಆಸಿಫ್ ಸೈಟ್, ಮಜೀದ್ ಆರ್., ಎನ್.ಸಲಾಂ, ಅನ್ಸಾರ್ ಉಪಸ್ಥಿತರಿದ್ದರು.







