ಕುಂಬ್ರ ಮರ್ಕಝುಲ್ ಹುದಾ ಮಕ್ಕಾ ವಲಯ ಕೋ ಆರ್ಡಿನೇಟರ್ ಆಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಆಯ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಮಕ್ಕಾ ವಲಯದ ಸಂಯೋಜಕರಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಅವರನ್ನು ನೇಮಕ ಮಾಡಲಾಗಿದೆ.
ಮರ್ಕಝುಲ್ ಹುದಾ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೃನಿ ಕಾಮಿಲ್ ನೇತೃತ್ವದಲ್ಲಿ ಮಕ್ಕಾ ಅಝೀಝಿಯ್ಯಾ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ಮಾಡಲಾಗಿದೆ. ಹಾಜಿ ಅಬ್ದುಲ್ ಹಮೀದ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು.
ಮರ್ಕಝುಲ್ ಹುದಾ ಸೌದಿ ರಾಷ್ಟೀಯ ಸಮಿತಿಯ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು, ಕೆಸಿಎಫ್ ಜಿದ್ದಾ ವಲಯ ಅಧ್ಯಕ್ಷ ಅಶ್ರಫ್ ಎಮ್ಮೆಸ್ಸೆಮ್ ಕಕ್ಕಿಂಜೆ ಶುಭ ಹಾರೈಸಿದರು
Next Story





