ಪ್ರಾಯೋಗಿಕ ತರಬೇತಿಯಿಂದ ವೃತ್ತಿ ಅನ್ವೇಷಣೆಗೆ ನೆರವು: ಡಾ.ಸತೀಶ್ ರಾವ್

ಮಂಗಳೂರು, ಜ.31: ನಗರದ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ರಕ್ತನಿಧಿ ಕೇಂದ್ರದಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕ ತರಬೇತಿ ಪಡೆದ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಮಾಣ ಪತ್ರ ವಿತರಿಸಿದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸತೀಶ್ ರಾವ್ ಮಾತನಾಡಿ ‘ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಸಿ ಪಡೆಯುವ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯೋ ಗಾವಕಾಶವನ್ನು ಹೆಚ್ಚಿಸುತ್ತದೆ .ಭವಿಷ್ಯದಲ್ಲಿ ವೃತ್ತಿ ಅನ್ವೇಷಣೆಗೆ ನೆರವಾಗುತ್ತದೆ. ತರಬೇತಿ ಪಡೆಯುವುದರಿಂದ ವೃತ್ತಿ ಜೀವನದ ಆರಂಭಿಕ ಸವಾಲುಗಳನ್ನು ಎದುರಿಸುವ ಆತ್ಮ ವಿಶ್ವಾಸ ಬೆಳೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು.
ರೆಡ್ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ‘ ವಿದ್ಯಾರ್ಥಿಗಳು ರಕ್ತ ಸಂಗ್ರಹ, ವರ್ಗೀಕರಣ, ರಕ್ತ ಹೊಂದಾಣಿಕೆ ಪರೀಕ್ಷೆ, ರಕ್ತದ ಘಟಕಗಳ ವರ್ಗೀಕರಣ ಸಹಿತ ಬ್ಲಡ್ ಬ್ಯಾಂಕ್ ಪೂರಕವಾದ ಪ್ರಾಯೋಗಿಕ ತರಬೇತಿ ಪಡೆದಿದ್ದು ಉದ್ಯೋಗಕ್ಕೆ ನೆರವಾಗಲು ಪ್ರಮಾಣ ಪತ್ರ ನೀಡಲಾಗಿದೆ ಎಂದರು.
ರಕ್ತನಿ ಕೇಂದ್ರದ ತಾಂತ್ರಿಕ ಮೇಲ್ವಿಚಾರಕಿ ಮರಿಯಾ ಆರತಿ ಸೋನ್ಸ್ , ರಕ್ತನಿ ಕೇಂದ್ರದ ಸಿಬ್ಬಂದಿ ಪ್ರಿಯಾ, ಪ್ರತೀಕ್ಷಾ ಉಪಸ್ಥಿತರಿದ್ದರು.







