ಅಜ್ಜಿನಡ್ಕ ಸರಕಾರಿ ಶಾಲೆಯಲ್ಲಿ 'ಸ್ವಚ್ಛತೆಯೇ ಸೇವೆ' ಕಾರ್ಯಕ್ರಮ

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಆಶ್ರಯದಲ್ಲಿ 'ಸ್ವಚ್ಛತೆಯೇ ಸೇವೆ' ಕಾರ್ಯಕ್ರಮ ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೋಟೆಕಾರ್ ಪ.ಪಂ. ಆರೋಗ್ಯ ಅಧಿಕಾರಿ ವಿಕ್ರಮ್ ಸ್ವಚ್ಛತೆ ಕಾಪಾಡುವ ಆವಶ್ಯಕತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಎಲ್ಲದಕ್ಕೂ ಮೊದಲು ನಾವು ಸ್ವಚ್ಛತೆಗೆ ಮಹತ್ವ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು.
ಪತ್ರಕರ್ತ ಬಶೀರ್ ಕಲ್ಕಟ್ಟ ಮಾತನಾಡಿದರು.
ಕೌನ್ಸಿಲರ್ ಇಸ್ಹಾಕ್, ಎಚ್ ಇಸ್ಮಾಯೀಲ್, ಸಿದ್ದೀಕ್ ಕೊಳಂಗರೆ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ರಝಿಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





