Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಜೂರು: ಮಸೀದಿಯ ವಿವಿಧ ಕಾಮಗಾರಿಗಳ...

ಮಜೂರು: ಮಸೀದಿಯ ವಿವಿಧ ಕಾಮಗಾರಿಗಳ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ1 Feb 2026 9:11 PM IST
share
ಮಜೂರು: ಮಸೀದಿಯ ವಿವಿಧ ಕಾಮಗಾರಿಗಳ ಉದ್ಘಾಟನೆ
ʼನೋಡ ಬನ್ನಿ ನಮ್ಮ ಮಸೀದಿʼ ಕಾರ್ಯಕ್ರಮ

ಕಾಪು : ಮಲ್ಲಾರು-ಮಜೂರಿನ ಬದ್ರಿಯಾ ಜುಮಅ ಮಸೀದಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಮಸೀದಿ ಕಟ್ಟಡ ಹಾಗೂ ಪರಿಸರದ ಸೌಂದರ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ "ನೋಡ ಬನ್ನಿ ನಮ್ಮ ಮಸೀದಿ" ಎಂಬ ವಿಶೇಷ ಕಾರ್ಯಕ್ರಮ ರವಿವಾರ ನಡೆಯಿತು.

ಅತ್ಯಾಧುನಿಕ ವಿನ್ಯಾಸ, ಅಪೂರ್ವ ಕೆತ್ತನೆಯ ಮಸೀದಿ ಪ್ರವೇಶ ದ್ವಾರ, ವಿಶಾಲ ಪ್ರಾರ್ಥನಾ ಮಂದಿರ ಹಾಗೂ ಆಕರ್ಷಕವಾಗಿ ರೂಪುಗೊಂಡ ಮಸೀದಿ ಪರಿಸರ ಎಲ್ಲರ ಗಮನ ಸೆಳೆಯುವಂತಿದೆ.

ನೋಡ ಬನ್ನಿ ನಮ್ಮ ಮಸೀದಿ ಎಂಬ ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಮಜೂರು ಗ್ರಾಮವು ಗಮನ ಸೆಳೆದಿದೆ. ಮಸೀದಿಯ ಇತಿಹಾಸ, ಧಾರ್ಮಿಕ ಮಹತ್ವ, ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗೂ ಭಾವೈಕ್ಯ ತೆಯ ಸಂದೇಶವನ್ನು ಸಾರ್ವಜನಿಕರಿಗೆ ತಿಳಿಸಲಾಯಿತು. ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ಸೇರಿದಂತೆ ಶಿಸ್ತಿನ ಬಗ್ಗೆ ವಿವರ ನೀಡಲಾಯಿತು. ಹಿಂದೂ, ಕ್ರಿಶ್ಚಿಯನ್, ಮಹಿಳೆಯರು, ಮಕ್ಕಳು ಎಲ್ಲರಿಗೂ ಮಸೀದಿ ಹಾಗೂ ಪ್ರಾರ್ಥನೆ ಸಂಬಂಧ ಇದ್ದ ಎಲ್ಲಾ ವಿಚಾರಗಳ ಕುರಿತು ಮಾಹಿತಿ ನೀಡಲಾಯಿತು. ವಿಶೇಷವಾಗಿ ಮಹಿಳೆಯರು, ಮಕ್ಕಳು ಸೇರಿ ದಂತೆ ಹಲವರು ತಂಡೋಪತಂಡವಾಗಿ ಆಗಮಿಸಿ ಮಸೀದಿ ವೀಕ್ಷಣೆ ಮಾಡಿ ತಮ್ಮ ಅನುಭವಗಳನ್ನ ಹೀಗೆ ಹಂಚಿಕೊಂಡರು.

ಕಾಪು ಸಮೀಪದ ಮಲ್ಲಾರು-ಮಜೂರಿನ ಬದ್ರಿಯಾ ಜುಮಅ ಮಸ್ಜಿದ್‍ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನೋಡ ಬನ್ನಿ ನಮ್ಮ ಮಸೀದಿ ಎಂಬ ವಿನೂತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಪ್ರವಾದಿಯವರ ಸಂದೇಶವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಅಗತ್ಯ. ಪ್ರವಾದಿ ಮುಹಮ್ಮದ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಜಗತ್ತಿನ ಪ್ರತಿಯೊಂದು ಮನುಕುಲಕ್ಕೂ ಮಾರ್ಗದರ್ಶಕರಾದ ಸರ್ವಮಾನವೀಯ ಪ್ರವಾದಿ ಎಂದು ಹೇಳಿದರು.

ಉದ್ಘಾಟನೆ: ಅಪೂರ್ವ ಕೆತ್ತನೆಯ ಮಸೀದಿಯ ಪ್ರವೇಶ ದ್ವಾರ, ವಿಶಾಲವಾದ ಸೋಲಾರ್ ಅಳವಡಿಕೆ, ಮಸೀದಿ ಅಂಗಳ ಪ್ರವೇಶದ ಮುಖ್ಯದ್ವಾರ, ತಡೆಗೋಡೆ ನಿರ್ಮಾಣ, ವಿಶಾಲವಾದ ಅಡುಗೆ ಕೊಣೆ ನಿರ್ಮಾಣ, ಶಾಶ್ವತ ಲೋಕದ ಪ್ರಥಮ ಮನೆ ದಫನಭೂಮಿಯ ಅಂದಗೊಳಿಸುವಿಕೆ ಮುಂತಾದ ಹಲವು ಅಭಿವೃದ್ದಿ ಕಾರ್ಯಗಳನ್ನು ಸಯ್ಯಿದ್ ಕುಂಬೋಳ್ ತಂಙಳ್ ಉದ್ಘಾಟಿಸಿದರು.

ಸನ್ಮಾನ: ಮಸೀದಿ ಸಮಗ್ರ ಅಭಿವೃದ್ಧಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಫಾರೂಕ್ ಚಂದ್ರನಗರ, ವಿವಿಧ ಕಾಮಗಾರಿಗಳ ದಾನಿಗಳಾದ ಶಂಸುದ್ದೀನ್ ಉಮರ್ ಮಜೂರು, ಮುಹಮ್ಮದ್ ಹನೀಫ್ ಮಜೂರು, ತಖ್ವೀಯತುಲ್ ಇಸ್ಲಾಂ ಯಂಗ್'ಮೆನ್ಸ್ ಅಸೋಸಿಯೇಶನ್ ಮಜೂರು, ಸಿರಾಜುಲ್ ಹುದಾ ದಫ್ ಸಮಿತಿ, ಸ್ವಲಾತ್ ಸಮಿತಿ ಕೊಂಬಗುಡ್ಡೆ ಯವರನ್ನು ಸನ್ಮಾನಿಸಲಾಯಿತು.

ನೌಫಲ್ ಸಖಾಫಿ ಕಳಸ, ಉಡುಪಿ ಸಂಯುಕ್ತ ಸಹಾಯಕ ಖಾಝಿ ಬಿ.ಕೆ. ಅಬ್ದುರ್ರಹ್ಮಾನ್ ಮದನಿ, ಕಾಪು ಖಾಝಿ ಪಿ.ಬಿ. ಅಹ್ಮದ್ ಮುಸ್ಲಿಯಾರ್, ಮಸೀದಿಯ ಖತೀಬ್, ಎಂ.ಕೆ. ಅಬ್ದುಲ್ ರಶೀದ್ ಸಖಾಫಿ ಅಲ್ ಕಾಮಿಲ್, ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾವ ಹಾಜಿ ಮುಳೂರು, ಗೌರವ ಅಧ್ಯಕ್ಷರು ಬಿಜೆಎಂ ಮಜೂರು ಹಾಜಿ ಮೋನು ಕರಂದಾಡಿ, ಉದ್ಯಮಿಗಳಾದ ಫೀರ್ ಸಾಹೇಬ್ ಉಡುಪಿ, ಯು.ಎ. ರಶೀದ್ ಕಟಪಾಡಿ, ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ, ನಮ್ಮ ನಾಡ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಯಹ್ಯಾನಕ್ವಾ ಜಿಲ್ಲಾ ಉಪಾಧ್ಯಕ್ಷ ಶಫಿ ಅಹಮದ್ ಖಾಝಿ, ಅಧ್ಯಕ್ಷರು ಕರಂದಾಡಿ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಪದ್ಮನಾಭ ಶಾನುಭಾಗ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶೇಖ್ ವಹೀದ್ ದಾವೂದ್, ಜಲಂಚಾರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೋಕ್ತೆಸರ ರವಿರಾಜ್ ಶೆಟ್ಟಿ ಪಂಜಿತ್ತೂರು, ಹಳೇ ವಿದ್ಯಾರ್ಥಿ ಸಂಘ ಕರಂದಾಡಿ ಶಾಲೆಯ ಅಧ್ಯಕ್ಷ ಕೆ. ವಾಸುದೇವ ರಾವ್ ಕರಂದಾಡಿ, ಮಜೂರು ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ ಕುಮಾರ್ ಕರಂದಾಡಿ, ವಾಸುದೇವ ರಾವ್, ಶಿರ್ವ ಗ್ರಾಮ ಪಂಚಾಯತ್ ರತನ್ ಶೆಟ್ಟಿ, ಶರ್ಪುದ್ದೀನ್ ಶೇಖ್, ಉದ್ಯಮಿ ದೀಪಕ್ ಕುಮಾರ್ ಎರ್ಮಾಳು, ಹಾಜಬ್ಬ ಅಭಿಮಾನ್ ಗೋಲ್ಡ್, ಮಜೂರು ಹೆಲ್ಪ್ ಲೈನ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್, ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ಶಿರ್ವ ಸುನ್ನೀ ಜಾಮಿಯ ಮಸ್ಜಿದ್ ಅಧ್ಯಕ್ಷ ಜುಬೈರ್ ಅಹ್ಮದ್, ತಖ್ವೀಯತುಲ್ ಇಸ್ಲಾಂ ಯಂಗ್‍ಮೆನ್ಸ್ ಅಸೋಸಿಯೇಶನ್ ಮಜೂರು ಅಧ್ಯಕ್ಷ ಮುಹಮ್ಮದ್ ಹನೀಫ್, ಸಿರಾಜುಲ್ ಹುದಾ ದಫ್ ಸಮಿತಿ ಮಜೂರು ಅಧ್ಯಕ್ಷ ಅಬ್ದುಲ್ ರಹೀಂ, ಸ್ವಲಾತ್ ಸಮಿತಿ ಕೊಂಬಗುಡ್ಡೆ ಅಧ್ಯಕ್ಷ ಬಾವ ಶೌಕತ್ ಅಲಿ, ಮುಳೂರು ಸುನ್ನೀ ಸೆಂಟರ್ ಮ್ಯಾನೇಜರ್ ಯು.ಕೆ. ಮುಸ್ತಫ ಸಅದಿ ಉಪಸ್ಥಿತರಿದ್ದರು.





share
ವಾರ್ತಾಭಾರತಿ
ವಾರ್ತಾಭಾರತಿ
Next Story
X