ನವಮಂಗಳೂರು ಬಂದರಿಗೆ ಆಗಮಿಸಿದ ಪ್ರವಾಸಿ ಹಡಗು ಎಂಎಸ್ ಸಿರೆನಾ

ಮಂಗಳೂರು, ಮಾ.8: ನವ ಮಂಗಳೂರು ಬಂದರಿಗೆ ರವಿವಾರ ಈ ವರ್ಷದ ಮೂರನೇ ಕ್ರೂಸ್ ಹಡಗು ಎಂಎಸ್ ಸಿರೆನಾ ಆಗಮಿಸಿದೆ.
ಈ ಪ್ರದೇಶದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಎಂಎಸ್ ಸಿರೆನಾದಲ್ಲಿದ್ದ ವಿದೇಶಿ ಪ್ರಯಾಣಿಕ ರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ಈ ಹಡಗನ್ನು ನಾರ್ವೇಜಿಯನ್ ಕ್ರೂಸ್ ಲೈನ್ ಹೋಲ್ಡಿಂಗ್ಸ್ ನಿರ್ವಹಿಸುತ್ತಿದೆ. ಕೊಲಂಬೊ - ಕೊಚ್ಚಿ - - ಗೋವಾ - ಮುಂಬೈ ಯಾಗಿ ಬೆಳಗ್ಗೆ 9 ಗಂಟೆಗೆ ಆಗಮಿಸಿದೆ.
ಈ ಹಡಗಿನಲ್ಲಿ 619 ಪ್ರಯಾಣಿಕರು ಮತ್ತು 390 ಸಿಬ್ಬಂದಿ ಇದ್ದಾರೆ. ಕರಾವಳಿ ಕರ್ನಾಟಕದ ರೋಮಾಂಚಕ ಸಂಸ್ಕೃತಿ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸುವ ಕ್ರೂಸ್ ಟರ್ಮಿನಲ್‌ನಲ್ಲಿ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು.
ಹಡಗಿನಲ್ಲಿದ್ದ ಪ್ರಯಣಿಕರು ಬಳಿಕ ಪ್ರಸಿದ್ಧ ಗೋಕರ್ಣನಾಥೇಶ್ವರ ದೇವಸ್ಥಾನ, ಐತಿಹಾಸಿಕ ಸೈಂಟ್ ಅಲೋಶಿಯಸ್ ಚಾಪೆಲ್, ಸಾವಿರ ಕಂಬದ ಜೈನ ದೇವಾಲಯ ಮತ್ತು ಸ್ಥಳೀಯ ಮಾರುಕಟ್ಟೆಗಳು ಸೇರಿದಂತೆ ಮಂಗಳೂರು ಮತ್ತು ಸುತ್ತಮುತ್ತಲಿನ ಹಲವಾರು ಪ್ರಮುಖ ಪ್ರವಾಸಿ ತಾಣಗಳ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಒಂದು ನೋಟವನ್ನು ಪ್ರವಾಸಿಗರಿಗೆ ಪರಿಚಯಿಸಲು ಸಾಂಪ್ರದಾಯಿಕ ಪ್ರದರ್ಶನಗಳು ಮತ್ತು ಧ್ಯಾನ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮುಂದೆ ಹಡಗು ತನ್ನ ಮುಂದಿನ ತಾಣವಾದ ಮರ್ಮುಗಾವೊ ಬಂದರಿಗೆ ಹೊರಡಲಿದೆ.







