ಉಳ್ಳಾಲ ದರ್ಗಾ ಅಧ್ಯಕ್ಷರಿಂದ ಸಿ.ಎಂ.ಸಿದ್ದರಾಮಯ್ಯ ಭೇಟಿ; ಗಲ್ಫ್ ಕನ್ನಡಿಗರ ರಕ್ಷಣೆಗೆ ಮನವಿ

ಉಳ್ಳಾಲ: ದರ್ಗಾ ಅಧ್ಯಕ್ಷದಾದ ಬಿ.ಜಿ ಹನೀಫ್ ಹಾಜಿ ಮುಖ್ಯಮಂತ್ರಿ ಸಿ.ಎಮ್ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಗಲ್ಫ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು .
ಅಮೇರಿಕ ಮತ್ತು ಇಸ್ರೇಲ್ ಇರಾನ್ ವಿರುದ್ದ ಪ್ರಾರಂಭ ವಾಗಿರುವ ಯುದ್ಧದ ಬೀತಿಯಿಂದ ಗಲ್ಫ್ ನಲ್ಲಿರವ ಲಕ್ಷಾಂತರ ಕನ್ನಡಿಗರ ಕುಟುಂಬವು ಭೀತಿಯಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಗಲ್ಫ್ ನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಬಗ್ಗೆ ಖಾತರಿಪಡಿಸಲು ಸಂಬಂದಪಟ್ಟವರೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಹಾಗೂ ಪವಿತ್ರ ಉಮ್ರಾ ಕೈಗೊಳ್ಳಲು ತೆರಳಿ ಹಿಂದಿರುಗಳು ವಿಮಾನದ ವ್ಯವಸ್ಥೆ ಇಲ್ಲದ ಬಗ್ಗೆ ಕ್ರಮ ಕೈಗೊಳ್ಳಲು ಕೋರಲಾಯಿತು.
ಈ ಸಂದರ್ಭ 17ನೇ ಬಜೆಟ್ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡ ದೂರದೃಷ್ಟಿ ಹಾಗೂ ಜನಪರ ಬಜೆಟ್ ಆಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯುತೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದರು. ಕೋಶಾಧಿಕಾರಿ ನಾಝಿಮ್ ರಹ್ಮಾನ್ ಉಪಸ್ಥಿತರಿದ್ದರು.





