ಸೋಮವಾರ ಶಅಬಾನ್ 1: ದ.ಕ. ಜಿಲ್ಲಾ ಖಾಝಿ

ಮಂಗಳೂರು, ಫೆ.10: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ (ಫೆ.10) ಶಅಬಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿ ರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ರಜಬ್ 30 ಪೂರ್ತಿಗೊಳ್ಳಲಿದೆ.
ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ (ಫೆ.11) ಶಅಬಾನ್ 1 ಆಗಲಿದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತೀರ್ಮಾನಿಸಿದ್ದಾರೆ.
ಫೆ.25ರ ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಬರಾಅತ್ ರಾತ್ರಿಯಾಗಿರುತ್ತದೆ ಮತ್ತು ಫೆ.26ರಂದು ಬರಾಅತ್ ದಿನವಾಗಿರುತ್ತದೆ ಎಂದು ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





