ಮದ್ರಸ ಪಬ್ಲಿಕ್ ಪರೀಕ್ಷೆ : ಕೆಮ್ಮಾರ 10ನೇ ತರಗತಿ ವಿದ್ಯಾರ್ಥಿನಿ ಝೈಬುನ್ನಿಸಾಗೆ ರ್ಯಾಂಕ್

ಝೈಬುನ್ನಿಸಾ
ಮಂಗಳೂರು, ಮಾ. 12: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 2025ರಲ್ಲಿ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಕೆಮ್ಮಾರ ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ ವಿದ್ಯಾರ್ಥಿನಿ ಝೈಬುನ್ನಿಸಾ 10 ನೇ ತರಗತಿಯಲ್ಲಿ ಎಲ್ಲಾ ನಾಲ್ಕು ವಿಷಯಗಳಲ್ಲೂ ತಲಾ 100 ಅಂಕಗಳೊಂದಿಗೆ ಒಟ್ಟು 400ರಲ್ಲಿ 400 ಅಂಕ ಪಡೆದಿದ್ದಾರೆ.
ಇದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ರ್ಯಾಂಕ್ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಝೈಬುನ್ನಿಸಾ ಅಬ್ದುಲ್ ಲತೀಫ್ ಝುಹ್ರಿ ಹಾಗೂ ಹಬೀಬಾ ದಂಪತಿಗಳ ಪುತ್ರಿ ಆಗಿರುತ್ತಾಳೆ.
ಈ ವರ್ಷ ಪಬ್ಲಿಕ್ ಪರೀಕ್ಷೆ ಬರೆದ ಐದನೇ ತರಗತಿಯ 12, ಏಳನೇ ತರಗತಿಯ 15, ಹತ್ತನೇ ತರಗತಿಯ 4 ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ. ಐದನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಹಾಶಿಮ್ 600 ರಲ್ಲಿ 550 ಹಾಗೂ ಏಳನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಅಫ್ರಾ 600 ರಲ್ಲಿ 582 ಅಂಕ ಪಡೆದು ತರಗತಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.