ದ್ವಿತೀಯ ಪಿಯು ಪರೀಕ್ಷೆ: ಬಬ್ಬುಕಟ್ಟೆಯ ಹಿರಾ ಪಿಯು ಕಾಲೇಜಿಗೆ ಶೇ.100 ಫಲಿತಾಂಶ

ಉಳ್ಳಾಲ, ಎ.11: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಬ್ಬುಕಟ್ಟೆಯ ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಲು ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಈ ಎರಡೂ ವಿಭಾಗದಲ್ಲಿ ಒಟ್ಟು 22 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹಾಜರಾದ 37 ವಿದ್ಯಾರ್ಥಿನಿಯರಲ್ಲಿ 36 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ 97% ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ ಖದೀಜ ರೈಫ಼ಾ(566), ಹಲೀಮಾ ವಿದಾದ್(555) ಟಾಪರ್ ಗಳಾಗಿದ್ದಾರೆ.
ವಾಣಿಜ್ಯ ವಿಭಾಗದ ಗಣಕ ವಿಜ್ಞಾನ ಸಂಯೋಜನೆಯಲ್ಲಿ ಆಯಿಶಾ ಹನ್ನತ್(562), ಫಿದಾ ಷಹಮ್(556), ವಾಣಿಜ್ಯವಿಭಾಗದ ಇತಿಹಾಸ ಸಂಯೋಜನೆಯಲ್ಲಿ ಫಾತಿಮಾತ್ ನಿಹಾಲಾ ಡಿ. (584), ನದಾ ಫಾತಿಮ(561), ಫಾತಿಮ ಸಫಾ(539) ಕಾಲೇಜಿಗೆ ಟಾಪರ್ ಆಗಿದ್ದಾರೆ.
ವಾಣಿಜ್ಯ ವಿಭಾಗದ ಸಂಖ್ಯಾಶಾಸ್ತ್ರ ಸಂಯೋಜನೆಯಲ್ಲಿ ಫಾತಿಮಾ ಸನಾ(578), ಬೀಬೀ ಆಯೀಶಾ(541), ತಸ್ಮೀಯಾ (538), ರಿಫಾ ಜೈನಬ (531), ಸಲೀಹ ಬಾನು (524), ಕತೀಜಾ ಹಸ್ನ ಜುಲೆಖ (523), ಫಾತಿಮಾ ನಶ್ವಾ(517) ಕಾಲೇಜಿಗೆ ಟಾಪರ್ ಆಗಿದ್ದಾರೆ.
ವಿಜ್ಞಾನ ವಿಭಾಗದ ಖದೀಜಾ ಹನಾ(580), ಸಲ್ಮಾ ಐಫಾ(550), ರೆಹನಾ ನಸೀಹ ಮನವ್ವರ (545) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.







