ಮೇ 12: ಅಂಗವಿಕಲರ ಮತ್ತು ಪೋಷಕರ ಸಮಾವೇಶ

ಮಂಗಳೂರು, ಮೇ 8: ಅಂಗವಿಕಲರ ಸಮುದಾಯದ ಬೇಡಿಕೆಗಳಾದ ಪಿಂಚಣಿ ಹೆಚ್ಚಳ, ಪಿಂಚಣಿ ಅರ್ಜಿಗೆ ಬಿಪಿಎಲ್ ಕಾರ್ಡ್ ಕಡ್ಡಾಯ ತೆರವು, ಉಚಿತ ಬಸ್ ಪ್ರಯಾಣ, 2016ರ ಅಂಗವಿಕಲ ಕಾಯ್ದೆ ರಾಜ್ಯದಲ್ಲಿ ಜಾರಿಗೊಳಿಸುವುದು, ಅಂಗವಿಕಲರ ಕಲ್ಯಾಣ ಮಂಡಳಿ ಸ್ಥಾಪಿಸುವುದು ಇತ್ಯಾದಿಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯಮಟ್ಟದ ಅಂಗವಿಕಲರ ಸಂಘಟನೆಗಳ ವತಿಯಿಂದ ಮೇ 21ರಿಂದ ಬೆಂಗಳೂರಿನಲ್ಲಿ ಹೋರಾಟ ನಡೆಯಲಿದೆ.
ಇದರ ಪೂರ್ವಭಾವಿ ಸಮಾವೇಶವು ಮೇ 12ರಂದು ಬೆಳಗ್ಗೆ 10ಕ್ಕೆ ಮಂಗಳೂರು ಮಿನಿವಿಧಾನ ಸೌಧದ ಹಿಂಬದಿ ಇರುವ ಡಿ ವರ್ಗ ನೌಕರರ ಸಭಾಂಗಣದಲ್ಲಿ ನಡೆಯಲಿದೆ. ಅಂಗವಿಕಲರು ಮತ್ತು ಅಂಗವಿಕಲರ ಪೋಷಕರು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ವಿಶೇಷ ಚೇತನರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ಮುರುಳೀಧರ್ ನಾಯಕ್, ಪೋಷಕರ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ ಮನವಿ ಮಾಡಿದ್ದಾರೆ.
Next Story





