Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ರಾಜ್ಯದ 12 ಜಿಲ್ಲೆಗಳಲ್ಲಿ ಎಂಸಿಎ ಭವನ:...

ರಾಜ್ಯದ 12 ಜಿಲ್ಲೆಗಳಲ್ಲಿ ಎಂಸಿಎ ಭವನ: ಸತೀಶ್ ಕೃಷ್ಣ ಸೈಲ್

ಕೆಎಂಸಿಎ ಸ್ಥಳಾಂತರಗೊಂಡ ಮಂಗಳೂರು ಕಚೇರಿ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ27 Jun 2025 6:56 PM IST
share
ರಾಜ್ಯದ 12 ಜಿಲ್ಲೆಗಳಲ್ಲಿ ಎಂಸಿಎ ಭವನ: ಸತೀಶ್ ಕೃಷ್ಣ ಸೈಲ್

ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೊಂದಣಿ ಮತ್ತು ಹಂಚಿಕೆ ಯಗಿರುವ 12 ಜಿಲ್ಲೆಗಳಲ್ಲಿ (ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ನ)ಎಂಸಿಎ ಭವನ ನಿರ್ಮಾಣ ಮಾಡಲಾಗುವುದು ಡಿಸೆಂಬರ್ ಅಂತ್ಯದೊಳಗೆ ಶಿಲಾನ್ಯಾಸ ನೆರವೇರಿಸ ಲಾಗುವುದು ಎಂದು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ನ ಅಧ್ಯಕ್ಷ ಎಂದು ಕೆಎಸ್ ಎಂಸಿಎ ಅಧ್ಯಕ್ಷ ಸತೀಶ್ ಕೃಷ್ಣ ಸೈಲ್ ತಿಳಿಸಿದ್ದಾರೆ.

ಅವರು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ನ ಮಂಗಳೂರು ಶಾಖೆಯ ಸ್ಥಳಾಂತರ ಗೊಂಡ ಕಚೇರಿಯನ್ನು ಯೆಯ್ಯಾಡಿ ಯಲ್ಲಿರುವ ಡಿಐಸಿ ಕಟ್ಟಡದ ಮೊದಲ ಮಹಡಿಯಲ್ಲಿ ಶುಕ್ರವಾರ ಉದ್ಘಾಟನೆ ನೆರವೇರಿಸಿ ಬಳಿಕ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತ ನಾಡುತ್ತಿದ್ದರು.

ಸಂಸ್ಥೆಗೆ ಕೆಐಎಡಿಬಿಯಿಂದ ಬೆಂಗಳೂರಿನಲ್ಲಿ ಹಂಚಿಕೆಯಾಗಿರುವ 01 ಎಕರೆ ಕೈಗಾರಿಕಾ ಭೂಮಿಯಲ್ಲಿ ಮುದ್ರಣ ಮತ್ತು ಐಟಿ ಮತ್ತು ಐಟಿಇಎಸ್ ಕಾರ್ಯಕ್ರಮ ಚಟುವಟಿಕೆಯ ವಿವರವಾದ ಕಾರ್ಯ ಯೋಜನೆ ಸಿದ್ಧಪಡಿಸ ಲಾಗುತ್ತಿದೆ. ಮಂಗಳೂರು ಶಾಖೆಯು 2009 ರಲ್ಲಿ ಸ್ಥಾಪನೆಯಾಗಿತ್ತು.ನಗರದ ಕಾವೂರಿನಲ್ಲಿ ಸ್ಥಳ ನಿಗದಿಯಾಗಿದೆ ಶೀಘ್ರವಾಗಿ ಎಂಸಿಎ ಭವನದ ಶಿಲಾ ನ್ಯಾಸ ನೆರವೇರಿಸ ಲಾಗುವು ದು ಎಂದು ಸತೀಶ್ ಕೃಷ್ಣ ಸೈಲ್ ತಿಳಿಸಿದ್ದಾರೆ.

ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಮೊದಲಿನ ಹೆಸರು ಮಾರ್ಕೆಟಿಂಗ್ ಕನ್ಸಲೆಂಟ್ & ಏಜೆನ್ಸಿಸ್ ಲಿಮಿಟೆಡ್) ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನದಲ್ಲಿ ಎಂಎಸ್‌ಐಎಲ್ ಅಂಗಸಂಸ್ಥೆಯಾಗಿ 1972 ರಲ್ಲಿ ಪ್ರಾರಂಭ.ಈ ಸಂಸ್ಥೆಯು ರಾಜ್ಯ ಸರ್ಕಾರದ ಏಕೈಕ ಜಾಹೀರಾತು ಸಂಸ್ಥೆಯಾಗಿದ್ದು ಕಳೆದ ಐದು ದಶಕಗಳಿಂದಲೂ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಪ್ರಚಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಉತ್ತಮ ಸೇವೆ ಸಲ್ಲಿಸುವ ದೃಷ್ಟಿಯಿಂದ 2002 ರಲ್ಲಿ ಹುಬ್ಬಳ್ಳಿಯಲ್ಲಿ ತನ್ನ ಪ್ರಥಮ ಶಾಖೆ ಆರಂಭಿಸಿದೆ. ಪ್ರಸ್ತುತ ರಾಜ್ಯಾದ್ಯಂತ 15 ಶಾಖೆಗಳು ಹಾಗೂ ಹೊರ ರಾಜ್ಯಗಳಲ್ಲಿ ಎರಡು ಶಾಖೆಗಳು (ಮುಂಬೈ ಮತ್ತು ನವದೆಹಲಿ) ಕಾರ್ಯನಿರ್ವಹಿಸುತ್ತಿವೆ.

ಕಳೆದ 2023-24 ರಲ್ಲಿ ರೂ. 412.12 ಕೋಟಿ ವಹಿವಾಟು ನಡೆಸಲಾಗಿದ್ದು, 2024-25 ರಲ್ಲಿ ರೂ. 431.81 ಕೋಟಿ ವಹಿವಾಟು ಸಾಧಿಸಲಾಗಿರುತ್ತದೆ ಎಂದು ಸತೀಶ್ ಕೃಷ್ಣ ಸೈಲ್ ವಿವರ ನೀಡಿದರು.

*ಐಎನ್ಎಸ್ ನೀತಿಯಂತೆ ಜಾಹೀರಾತು ಪ್ರಕಟಣೆಯ 60ದಿನಗಳಲ್ಲಿ ಹಣ ಪಾವತಿಗೆ ಕ್ರಮ:-ಐಎನ್ಎಸ್ ನೀತಿಯಂತೆ ಸಂಸ್ಥೆಯ ಮೂಲಕ ಜಾಹೀರಾತು ಪ್ರಕಟಣೆಯ 60ದಿನಗಳಲ್ಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಸಂಸ್ಥೆಗೆ ಸರ್ಕಾರದ ವಿವಿಧ ಇಲಾಖೆಗಳು, ನಿಗಮ/ಮಂಡಳಿಗಳಿಂದ ಜಾಹೀರಾತು ಬಿಡುಗಡೆ ಸಂಬಂಧ ಸುಮಾರು ರೂ.120 ಕೋಟಿ ಗಳಷ್ಟು ಬಿಲ್‌ಗಳು ವಸೂಲಿಯಾಗದೇ ಬಾಕಿ ಉಳಿದಿವೆ.ಸಂಸ್ಥೆಯು ಇವೆಂಟ್‌ಗಳ ಆಯೋಜನೆ, ಡಿಜಿಟಲ್ ಮೀಡಿಯಾ, ಪ್ರಚಾರ ಹಾಗೂ ಮುದ್ರಣ ಸೇವೆ ಪೂರೈಕೆ ಕಾರ್ಯದಲ್ಲೂ ತೊಡಗಿದ್ದು, ಹೆದ್ದಾರಿ ಫಲಕಗಳ ಸ್ಥಾಪನೆ, ಗೋಡೆಗಳ ಪೈಟಿಂಗ್, ಕಾಫಿ ಟೇಬಲ್ ಇತ್ಯಾದಿ ಸೇವೆಗಳನ್ನು ಮತ್ತು ಸೋಷಿಯಲ್‌ ಮೀಡಿಯ. ಹೋರ್ಡಿಂಗ್‌ಗಳು, ಎಲ್‌ಇಡಿ ಬೋರ್ಡ್‌ಗಳು, ಕಾರ್ಯಕ್ರಮ ಸಂಯೋಜನೆ, ನಿರ್ವಹಣೆ ಸೇವೆಗಳನ್ನು ಸಹಾ ಒದಗಿಸುತ್ತಿದೆ.

ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್‌ಎಸ್), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ (ಎಂಓಆರ್‌ಡಿ), ರಾಜಸ್ಥಾನ ಸಂವಾದ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜಸ್ಥಾನ ಸರ್ಕಾರ, ರಾಜಸ್ಥಾನ ಪ್ರವಾಸೋದ್ಯಮ ಇಲಾಖೆ. ರಾಜಸ್ಥಾನ ಸರ್ಕಾರ, ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್), ಸೆಂಟ್ರಲ್ ಬ್ಯೂರೂ ಆಫ್ ಕಮ್ಯೂನಿಕೇಷನ್ (ಸಿಬಿಸಿ), ಬೆಸಿಲ್(ಬಿಇಸಿಐಎಲ್), ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ (ಆರ್‌ಎಐಎಲ್‌ಟಿಎಲ್) ಬಿಆರ್‌ಐಸಿಎಸ್ ಛೇಂಬರ್ ಆಫ್ ಕಾಮರ್ಸ್‌(ಬಿಆರ್‌ಐಸಿಎಸ್) ಸೇರಿದಂತೆ ಹಲವಾರು ಇಲಾಖೆ/ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸೇವೆ ಒದಗಿಸಲು ಕಾರ್ಯ ಯೋಜಿಸಲಾಗಿದೆ.

ಸಂಸ್ಥೆಯು ತನ್ನ ವಿಶಿಷ್ಟ ಸೇವೆಗಾಗಿ ಎರಡು ಬಾರಿ(2011-12 ಮತ್ತು 2020-21) ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿ ಪಡೆದಿದೆ.

ಕಳೆದ ಐದು ವರ್ಷಗಳಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯಡಿ ರೂ. 285.37 ಲಕ್ಷಗಳನ್ನು ವೆಚ್ಚಮಾಡಿದೆ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಾರ್ಷಿಕ ತಲಾ ರೂ. 1.00 ಕೋಟಿ ದೇಣಿಗೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಕಂಪನಿಯ ಲಾಭದಲ್ಲಿ ರೂ. 5.28 ಕೋಟಿಗಳ ಲಾಭಾಂಶ ವನ್ನು ಸರ್ಕಾರಕ್ಕೆ ಸಂದಾಯಿಸಲಾಗಿದ್ದು, ವಿಶೇಷ ಲಾಭಾಂಶವನ್ನು ಸಹಾ ಸರ್ಕಾರಕ್ಕೆ ಸಂದಾಯ ಮಾಡಲಾಗುತ್ತಿದೆ.

ಕೆಎಸ್‌ಎಂಸಿಎಗೆ 4ಜಿ ವಿನಾಯಿತಿಯನ್ನು ರೂ. 25.00 ಲಕ್ಷದಿಂದ ರೂ. 200 ಲಕ್ಷಗಳಿಗೆ ವಿಸ್ತರಿಸಿದೆ. ಇದಲ್ಲದೇ ವಿವಿಧ ಸ್ಟಾರ್ಟ್‌ ಅಪ್‌ಗಳ ವೃತ್ತಿಪರರ ಜೊತೆ ಹಾಗೂ ವಿವಿಧ ಕಂಪನಿಗಳು, ಎಂಎಸ್‌ಎಂಇ, ಬ್ಯಾಂಕ್‌ಗಳು, ಪಿಎಸ್‌ಯುಗಳು ಮತ್ತು ಗ್ರಾಹಕರೊಂದಿಗೆ ಚರ್ಚಿಸಲಾಗುತ್ತಿದ್ದು, ಸ್ಟಾರ್ಟ್‌ ಅಪ್ ಹಾಗೂ ಸ್ಟಾರ್ಟ್ ಅಪ್ ಮೆಂಟರ್‌ಗಳ ಸಂಪರ್ಕ ಸೇತುವೆ ಹಾಗೂ ತಂತ್ರಜ್ಞಾನ ಪ್ಲಾಟ್‌ಫಾರಂ ಆಗಿ ಸಂಸ್ಥೆಯು ವ್ಯವಹಾರ ವೃದ್ಧಿಗೆ ವೇದಿಕೆ ಒದಗಿಸಲು ಯೋಜಿಸಲಾಗಿದೆ ಎಂದು ಸತೀಶ್ ಕೃಷ್ಣ ಸೈಲ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಕೆಎಸ್ಏಂಸಿಎ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅತೀಕುಲ್ಲಾ ಶರೀಫ್,ಉಪ ಪ್ರಧಾನ ವ್ಯವಸ್ಥಾಪಕಪಿ.ಎಸ್.ನಂದೀಶ್ ,ಮಂಗಳೂರು ಶಾಖಾ ವ್ಯವಸ್ಥಾಪಕ ರಾಘವೇಂದ್ರ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು. ವಿಶೇಷ ಅಧಿಕಾರಿ ಅನುರಾಧ ಶರತ್ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X