ಸಿ.ಎ. ಅಂತಿಮ ಪರೀಕ್ಷೆ: ಆಳ್ವಾಸ್‌ನ 14 ವಿದ್ಯಾರ್ಥಿಗಳು ಉತ್ತೀರ್ಣ

ಮಂಗಳೂರು, ಜ.10: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 14 ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 9 ವಿದ್ಯಾರ್ಥಿಗಳು ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ನೌಫಲ್, ವಾಣಿಶ್ರೀ, ಧಾಮಿನಿ, ಮೇಘಾ ಆರ್. ಶೆಟ್ಟಿ, ತೇಜಸ್ ಆಚಾರ್ಯ, ಕ್ಲಾರಿಸನ್, ಪ್ರಸಾದ ಬಂಡೇಕರ್, ದರ್ಶನ್ ಜಿ.ಎಚ್, ರಾಷ್ಟ್ರಿತ್ ಜಿ.ಸಿ, ಅವಿನಾಶ್, ಅಂಕಿತಾ ಕಲ್ಲಪ್ಪ, ಸೂಕ್ಷ್ಮ ಎಸ್. ಆಚಾರ್ಯ, ವಿನಾಯಕ್, ಅಭಿಷೇಕ್ ಚೋಟಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್, ಪದವಿಪೂರ್ವ ವಾಣಿಜ್ಯ ವಿಬಾಗದ ಡೀನ್ ಪ್ರಶಾಂತ್ ಎಂ.ಡಿ ಹಾಗೂ ಸಿ.ಎ. ಸಂಯೋಜಕರಾದ ಅನಂತಶಯನ, ಅಪರ್ಣಾ ಕೆ. ಅಭಿನಂದಿಸಿದ್ದಾರೆ.
Next Story





