"ಲರ್ನ್ ದಿ ಕುರ್‌ಆನ್"14ನೇ ಹಂತದ ಪಬ್ಲಿಕ್ ಪರೀಕ್ಷಾ ಫಲಿತಾಂಶ

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಇದರ ಅಧೀನ ಸಂಸ್ಥೆಗಳಾದ ಸಲಫಿ ಎಜ್ಯುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್‌ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ ರಿಯಾದ್ ಇವುಗಳ ಜಂಟಿ ಆಶ್ರಯದಲ್ಲಿ ಜ.5ರಂದು ನಡೆದ 14ನೇ ಹಂತದ ಲರ್ನ್ ದಿ ಕುರ್ ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಕನ್ನಡ ವಿಭಾಗದಲ್ಲಿ ಪ್ರಥಮ ಮುಬಶಿರ (DE-LA090).ದ್ವಿತೀಯ ಝೀನತ್ ನಂದಾವರ (KL-LA005) ,ರೇಷ್ಮ ಪರ್ವೀನ್ (MU-LA030),ನಿಶಾನ (UL-LA051),ತಸ್ನೀಮ (DE-LA092).ತೃತೀಯ ಆಯಿಷಾ ಕಣ್ಣೂರ್ (KA-LA0071).
ಇಂಗ್ಲೀಷ್ ವಿಭಾಗದಲ್ಲಿ ರೂಹಿ ಶಬೀರ್ (MU-LA046) ಪ್ರಥಮ. ಫಾತಿಮ ಜಝೀಲ (UL-LA082)ದ್ವಿತೀಯ. ಅಯಿಷಾ (FA-LA032) ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ವಿಭಾಗದಲ್ಲಿ ಪ್ರಥಮ ಹನೀಫಾ ಲಿಫಾಮ್ (KU-GR027),ದ್ವಿತೀಯ ಆಯೇಷಾ ಶನೂಮ್ (KU-GR026), ತೃತೀಯ ಮರ್ಯಮ್ ಅರ್ಶಿಯ (KA-GR006) ಕನ್ನಡ ಹಾಗೂ ಇಂಗ್ಲೀಷ್ ವಿಭಾಗ ದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರಿಗೆ ಉಚಿತ ಉಮ್ರಾ ಪ್ರಯಾಣ ಹಾಗೂ ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ಚಿನ್ನದ ನಾಣ್ಯ ಗಳನ್ನು, ವಿದ್ಯಾರ್ಥಿ ವಿಭಾಗ ದವರಿಗೆ ನಗದು ಮೊತ್ತ ನೀಡಲಾಗುವುದು ಹಾಗೂ 28ಮಂದಿಗೆ. ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗುವುದು.
ಈ ಬಹುಮಾನ ಗಳನ್ನು ಜ.19ರಂದು ಉಳ್ಳಾಲ ಸಲ್ ಸಬೀಲ್ ಮಸ್ಜಿದ್ ಗ್ರೌಂಡ್ ನಲ್ಲಿ ನಡೆಯುವ ಸಮಾವೇಶ ದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.







