ಮೇ 16ರಂದು ಕಾವೂರು ವಿಭಾಗದ ಹಲವೆಡೆ ವಿದ್ಯುತ್ ನಿಲುಗಡೆ
![ಮೇ 16ರಂದು ಕಾವೂರು ವಿಭಾಗದ ಹಲವೆಡೆ ವಿದ್ಯುತ್ ನಿಲುಗಡೆ ಮೇ 16ರಂದು ಕಾವೂರು ವಿಭಾಗದ ಹಲವೆಡೆ ವಿದ್ಯುತ್ ನಿಲುಗಡೆ](https://www.varthabharati.in/h-upload/2024/05/15/1266807-electricity1652489245.webp)
ಸುರತ್ಕಲ್: ಸುರತ್ಕಲ್ ಇಂಡಸ್ಟ್ರಿಯಲ್ ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 16ರಂದು ಕಾವುರು ಉಪ ವಿಭಾಗ ವ್ಯಾಪ್ತಿಯ ಹಲವೆಡೆ ವಿದ್ಯುತ್ ನಿಲುಗಡೆಯಾಗಲಿದೆ.
33 ಕೆವಿ ಸುರತ್ಕಲ್ ಇಂಡಸ್ಟ್ರಿಯಲ್ ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಸುರತ್ಕಲ್ ಭಾಗದ ಸುರತ್ಕಲ್, ಕಾನ, ಕಟ್ಲ, ತಡಂಬೈಲ್, ಮುಂಚೂರು, ಮುಕ್ಕ, ಸಸಿಹಿತ್ಲು, ಚೇಳಾಯರು, ಮಧ್ಯ, ಕೃಷ್ಣಾಪುರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್ ಕೃಷ್ಣಾಪುರ, ಚೊಕ್ಕಬೆಟ್ಟು, ಕೋಟೆ, ಕುತ್ತೆತ್ತೂರು, ಆದರ್ಶನಗರ, ರಾಜೀವ ನಗರ, ಸೂರಿಂಜೆ, ಶಿಬರೂರು, ಬಾಳ, ಮಂಗಳಪೇಟೆ ಹಾಗೂ 3/11 ಕೆವಿಯ ಎನ್.ಐ.ಟಿ.ಕೆ ಉಪಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಕಾವೂರು ವಿಭಾಗದ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯ ಕಾರ್ಯನಿರ್ವಾಹಕ ಇಂಜಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.