ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್| ಮಾ.16ರವರೆಗೆ ಜೆಮ್‌ಸ್ಟೋನ್ ಜುವೆಲ್ಲರಿ ಪ್ರದರ್ಶನ

ಮಂಗಳೂರು, ಮಾ.8: ನಗರದ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಜೆಮ್‌ಸ್ಟೋನ್ ಜುವೆಲ್ಲರಿ ಪ್ರದರ್ಶನ ಶನಿವಾರ ಆರಂಭಗೊಂಡಿದ್ದು, ಮಾ.16ರವರೆಗೆ ನಡೆಯಲಿದೆ.
ಈ ಜುವೆಲ್ಲರಿ ಪ್ರದರ್ಶನ-ಮಾರಾಟವನ್ನು ನಗರದ ಬ್ಯೂಟಿಶಿಯನ್ ದೀಪಲ್‌ಪ್ರೀತ್ ಶೆಟ್ಟಿ ಮತ್ತು ಹವ್ಯಾಸಿ ಸಮಾಲೋಚಕಿ ರಶ್ಮಿ ಆರ್. ಪ್ರಭು ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಸ್ಟೋರ್ ಹೆಡ್ ಶರತ್‌ಚಂದ್ರನ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್ ಉಪಸ್ಥಿತರಿದ್ದರು.
ಈ ಉತ್ಸವದಲ್ಲಿ ಏರಾ, ಪ್ರೇಸಿಯಾ, ವಿರಾಝ್ ಸಂಗ್ರಹಗಳಿವೆ. ಪ್ರತಿಯೊಂದು ಕೂಡ ಸಂಪ್ರದಾಯ ಮತ್ತು ಸಮಕಾಲೀನ ವಿನ್ಯಾಸದ ವಿಶಿಷ್ಟತೆಗೆ ಹೆಸರುವಾಸಿಯಾಗಿದೆ. ಗ್ರಾಹಕರು ತಮಗಿಷ್ಟವಾದ ಆಭರಣಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಸಂದರ್ಭ ಮಹಿಳಾ ದಿನಾಚರಣೆಯ ಅಂಗವಾಗಿ ಬೇರೆ ಬೇರೆ ಕ್ಷೇತ್ರದ ಸಾಧಕಿಯರಾದ ಬ್ಯೂಟಿಶಿಯನ್ ದೀಪಲ್‌ಪ್ರೀತ್ ಶೆಟ್ಟಿ ಮತ್ತು ಹವ್ಯಾಸಿ ಸಮಾಲೋಚಕಿ ರಶ್ಮಿ ಆರ್. ಪ್ರಭು ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಡಿರುವ ಮೈಮುನಾ ಮತ್ತವರ ಪುತ್ರಿ ಅಶ್ವೀನಾ ಅವರನ್ನು ಸನ್ಮಾನಿಸಲಾಯಿತು.