ಕೋಟೆಕಾರ್: ಡಿ.17ರಂದು ಧ್ಸಿಕ್ರ್ ಹಲ್ಕಾ ವಾರ್ಷಿಕ ಸಮಾರೋಪ ಸಮಾರಂಭ

ಕೋಟೆಕಾರ್: ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ನಲ್ಲಿ ನಡೆಯುವ ಮಾಸಿಕ ಧ್ಸಿಕ್ರ್ ಹಲ್ಕಾ ಮಜ್ಲಿಸ್ ನ 33ನೇ ವಾರ್ಷಿಕೋತ್ಸವ ದ ಸಮಾರೋಪ ಸಮಾರಂಭ ಡಿ 17ರ ಮಗ್ರಿಬ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷ ಎ ಎಂ ಅಬ್ಬಾಸ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಲಿರುವುದು.
ಧ್ಸಿಕ್ರ್ ಹಲ್ಕಾ ಮಜ್ಲಿಸ್ ನೇತೃತ್ವ ಖುರ್ರತುಸಾದಾತ್ ಖಾಝಿ ಫಝಲ್ ಕೋಯಮ್ಮ ತಂಙಲ್ ಕೂರತ್ ವಹಿಸಲಿರುವರು. ಇಬ್ರಾಹಿಮ್ ಫೈಝಿ ಉಚ್ಚಿಲ ಉದ್ಘಾಟಿಸುವರು. ಮುನೀರ್ ಸಖಾಫಿ ಕೆ ಸಿ ರೋಡ್ ಸ್ವಾಗತ ಮಾಡುವರು. ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಮುಖ್ಯ ಭಾಷಣ ಮಾಡುವರು. MSM ಅಬ್ದುರ್ರಶೀದ್ ಝೈನಿ ತಲಪಾಡಿ ಪ್ರಸ್ತಾವಿಕ ಭಾಷಣ ಮಾಡುವರು. ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸುವರು ಎಂದು ಮಸೀದಿ ಕಾರ್ಯದರ್ಶಿ ಬಿ ಎಚ್ ಇಸ್ಮಾಯಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





