ದ.ಕ ಜಿಲ್ಲೆ| ಅಂತಿಮ ಮತದಾರರ ಪಟ್ಟಿ ಪ್ರಕಟ: ಒಟ್ಟು 18,13,556 ಮತದಾರರು

ಮಂಗಳೂರು: ಭಾರತ ಚುನಾವಣಾ ಆಯೋಗ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,13,556 ಮತದಾರರು ಇದ್ದಾರೆ.
ಈ ಪೈಕಿ ಪುರುಷರು-8, 84,373, ಮಹಿಳೆಯರು 9,29, 115, ಮಂಗಳಮುಖಿಯರು-68 ಇದ್ದಾರೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ.ಅವರು ಸೋಮವಾರ ತಮ್ಮ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಪಟ್ಟಿಯನ್ನು ಹಸ್ತಾಂತರಿಸಿದರು.
ಮತದಾರರ ಪಟ್ಟಿಯ ವಿವರ:
ಬೆಳ್ತಂಗಡಿ- 2,32, 235, ಮೂಡಬಿದ್ರಿ- 2,10,088, ಮಂಗಳೂರು ನಗರ ಉತ್ತರ- 2,55,515, ಮಂಗಳೂರು ನಗರ ದಕ್ಷಿಣ- 2,52, 268, ಮಂಗಳೂರು - 2,10,127, ಬಂಟ್ವಾಳ-2,28,962, ಪುತ್ತೂರು-2,16,068, ಸುಳ್ಯ 2,08,293.
ಜನವರಿ 6ರ ನಂತರ ನಿರಂತರ ಪರಿಷ್ಕರಣೆಯು ಚಾಲ್ತಿಯಲ್ಲಿದ್ದು ಜನವರಿ 1,ಎಪ್ರಿಲ್ 1, ಜುಲೈ 1, ಅಕ್ಟೋಬರ್ 1 ದಿನಾಂಕಗಳಿಗೆ 18 ವಷರ್ ತುಂಬುವ ಮತದಾರರು ಸೇರ್ಪಡೆಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ನಿರಂತರ ಪರಿಷ್ಕರಣೆಯ ಸಂದರ್ಭದಲ್ಲಿ , ತೆಗೆದು ಹಾಕಲು ಮತು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ಅರ್ಹ ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಮೂಲಕ Voter Helpline App (VHA) ಮತ್ತು ಮೊಬೈಲ್ Voters service portal
ಸಾರ್ವಜನಿಕರುತಮ್ಮ ವ್ಯಾಪ್ತಿಯಲ್ಲಿ ಬರುವ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿಸುವ ಬಗ್ಗೆ ಮತ್ತು ಲೋಪ ದೋಷಗಳ ಬಗ್ಗೆ ಪರಿಶೀಲಿಸಿಕೊಳ್ಳಬಹುದು.ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು. www.ceokarnataka.kar.nic.in







