ಮೇ 19ರಂದು ದ.ಕ. ಜಿಲ್ಲೆಯಲ್ಲಿ ಎಲ್ಲೋ ಅಲೆರ್ಟ್: ಹವಾಮಾನ ಇಲಾಖೆ
ಭಾರೀ ಮಳೆಯ ನಿರೀಕ್ಷೆ

ಮಂಗಳೂರು: ರಾಜ್ಯ ಹವಾಮಾನ ಇಲಾಖೆಯು ಮೇ 19 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೋ ಅಲೆರ್ಟ್ ಘೋಷಿಸಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾ ಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ.
ಮೇ 20ರಿಂದ ಮೂರು ದಿನಗಳ ವಾರೆಂಜ್ ಅಲೆರ್ಟ್ ಘೋಷಿಸಲಾಗಿದೆ. ಮಂಗಳೂರು ನಗರ ಹಾಗೂ ಆಸುಪಾಸು ಕೆಲವೆಡೆ ರವಿವಾರ ಬೆಳಗ್ಗೆ ಹಾಗೂ ಸಂಜೆ ಹನಿಮಳೆ ಸುರಿದಿದೆ. ಬೆಳಗ್ಗೆ ಮತ್ತು ಸಂಜೆ ಮೋಡ ಕವಿದ ವಾತಾವರಣ ಮತು ವಿಪರೀತ ಸೆಖೆ ಇತ್ತು.
Next Story