ಕೃಷ್ಣಾಪುರ: ʼಹಮ್ದ್ ಫುಡ್ಸ್ʼ 2ನೆ ಮಳಿಗೆ ಉದ್ಘಾಟನೆ

ಸುರತ್ಕಲ್: ಹಮ್ದ್ ಮಸಾಲಾ ಉತ್ಪನ್ನಗಳ ಉತ್ಪಾದಕರು ಹಾಗೂ ಹೋಲ್ ಸೇಲ್ ಮತ್ತು ರಿಟೇಲ್ ಮಾರಾಟಗಾರರಾಗಿರುವ ಹಮ್ದ್ ಫುಡ್ಸ್ ಅವರ ಎರಡನೇ ಮಳಿಗೆ ಕೃಷ್ಣಾಪುರದ 7ನೇ ಬ್ಲಾಕ್ ವೆಲ್ ಕಮ್ ಸಂಕೀರ್ಣದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಮಳಿಗೆಯನ್ನು ಮಂಗಳೂರು ಆಯುರ್ವೇದ ಮೆಡಿಕಲ್ ಕಾಲೇಜಿನ ಎಚ್ ಒ ಡಿ ಡಾ. ವಹೀದ ಬಾನು ಉದ್ಘಾಟಿಸಿದರು.
ಬಳಿಕ ಮಾತಮಾಡಿದ ಅವರು, ಹಮ್ದ್ ಉತ್ಪನ್ನಗಳು ಸದ್ಯ ರಾಜ್ಯಾದ್ಯಂತ ಮಾರುಕಟ್ಟೆ ಹೊಂದಿವೆ. ಇದು ಈಗಾಗಲೇ ಇರುವ ಹೆಸರಾಂತ ಮಸಾಲಾ ಉತ್ಪನ್ನಗಳಿಗೆ ಸ್ಪರ್ಧೆ ನೀಡುತ್ತಿದೆ. ಇದರ ಕೆಲವೊಂದು ಉತ್ಪನ್ನಗಳು ಆಯುರ್ವೇದ ಔಷದೀಯ ಗುಣಗಳನ್ನೂ ಹೊಂದಿದೆ ಎಂದ ಅವರು, ಸಂಸ್ಥೆಯು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ ಎಂದು ಶುಭಹಾರೈಸಿದರು.
ಬಳಿಕ ಮಾತನಾಡಿ ಸಂಸ್ಥೆಯ ಕುರಿತು ವಿವರಿಸಿದ ಕೃಷ್ಣಾಪುರ ಹಮ್ದ್ ಫ್ರಾಂಚೈಸಿ ಮಾಲಕ ಅಬ್ದುಲ್ ಹಫೀಝ್, ಸಂಸ್ಥೆಯು 150ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಎಲ್ಲಾ ಉತ್ಪನ್ನಗಳು ನೈಸರ್ಗಿಕ ಹಾಗು ಓರ್ಗ್ಯಾನಿಕ್ ಆಗಿವೆ, ಯಾವುದೇ ಉತ್ಪನ್ನಗಳಿಗೆ ಬಣ್ಣ, ರಾಸಾಯನಿಕ ಬಳಸಲಾಗುವುದಿಲ್ಲ. ಸಂಸ್ಥೆಯ ಉತ್ಪನ್ನಗಳ ಮಳಿಗೆ ಈಗಾಗಲೇ ಮಂಗಳೂರಿನ ಫಲ್ನೀರ್ ನಲ್ಲಿದ್ದು, ಎರಡನೇ ಮಳಿಗೆ ಕೃಷ್ಣಾಪುರದಲ್ಲಿ ತೆರೆಯಲಾಗಿದೆ. ಶೀಘ್ರ ತೊಕ್ಕೊಟ್ಟಿನಲ್ಲಿ ಮೂರನೇ ಮಳಿಗೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯಲ್ಲಿ ಬ್ರೋಸ್ಟಡ್ ಚಿಕನ್ ಮಿಕ್ಸ್, ಮೀಟ್ ಸುಕ್ಕ, ಮಸಾಲ, ಫಿಶ್ ಫ್ರೈ ಮಸಾಲ, ಅಫ್ಘಾನಿ ಚಿಕನ್ ಪೇಸ್ಟ್, ಫಿಶ್ ಪುಳಿಮುಂಚಿ, ಟಿಕ್ಕಾ ಮಸಾಲ, ಪೆಪ್ಪರ್ ಟಿಕ್ಕಾ ಮಸಾಲ ಹಾಗು 100ಕ್ಕೂ ಅಧಿಕ ಮಸಲಾ ಉತ್ಪನ್ನಗಳು, ಬೇಬಿ ಫೂಡ್ ಗಳು, ಫ್ರೋಝನ್ ಉತ್ಪನ್ನಗಳು, ಸ್ಕ್ವಾಶಸ್ ಉತ್ಪನ್ನಗಳು ಸೇರಿ ಒಟ್ಟು 150ಕ್ಕೂ ಹೆಚ್ಚಿನ ಉತ್ಪನ್ನಗಳು ಹಮ್ದ್ ಫುಡ್ಸ್ ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಸದಸ್ಯೆ ಶಂಶಾದ್ ಅಬೂಬಕರ್, ಚೊಕ್ಕಬೆಟ್ಟು ಕಾರುಣ್ಯ ಚರ್ಚ್ ಶಾಲೆಯ ರುಫೀನ, ನ್ಯಾಯವಾದಿ ಮಮ್ತಾಝ್, ಕೃಷ್ಣಾಪುರ ಹಿರಾ ಪಬ್ಲಿಲ್ ಸ್ಕೂಲ್ ನ ಪ್ರಾಂಶುಪಾಲೆ ಭವ್ಯಾ, ಸುಫಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶಬ್ನಮ್ , ರೋಯಲ್ ಬುರ್ಖಾದ ಮಾಲಕಿ ಜಝೀಲಾ ಇಕ್ಬಾಲ್, ಯೂ ಟ್ಯೂಬರ್ ಫಾತಿಮಾ ಎಂ., ಹಮ್ದ್ ಫುಡ್ಸ್ ಮಾಲಕರಾದ ಶಾಹಿದಾ, ಮರಿಯಂ ಶಹೀರ, ಶರೀಫ್ ಮೊದಲಾದವರು ಉಪಸ್ಥಿತರಿದ್ದರು.







