ಅಂತರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್: ಸುಷ್ಮಾ ತಾರನಾಥ್‌ಗೆ ಚಿನ್ನ, 2 ಬೆಳ್ಳಿ, ಕಂಚಿನ ಪದಕ

ಮಂಗಳೂರು: ಹಳೆಯಂಗಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಸುಷ್ಮಾ ತಾರನಾಥ್ ಅವರು ಜು.5 ಮತ್ತು 6ರಂದು ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಶಾಟ್ ಪುಟ್ ನಲ್ಲಿ ಬಂಗಾರದ ಪದಕ, 100ಮೀಟರ್ ಓಟದಲ್ಲಿ ಬೆಳ್ಳಿ ಪದಕ, ತ್ರಿಬಲ್ ಜಂಪ್ ನಲ್ಲಿ ಬೆಳ್ಳಿ ಪದಕ ಹಾಗೂ ವುಮೆನ್ಸ್ ರಿಲೇಯಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
ಈ ಕ್ರೀಡಾಕೂಟದಲ್ಲಿ ಭಾರತದಿಂದ 46 ಕ್ರೀಡಾಪಟುಗಳ ಜೊತೆಗೆ ಒಟ್ಟು 670 ಅಂತರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿದ್ದರು.
Next Story





