ಮೇ 20: ಮಂಗಳೂರಿನಲ್ಲಿ ಸಿಂಧೂರ ವಿಜಯೋತ್ಸವ

ಮಂಗಳೂರು, ಮೇ 17: ಭಾರತ- ಪಾಕಿಸ್ತಾನದ ವಿರುದ್ಧ ನಡೆಸಿದ ಅಪರೇಷನ್ ಸಿಂಧೂರ ಸೈನಿಕ ಕಾರ್ಯಾಚರಣೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸಿಂಧೂರ ವಿಜಯೋತ್ಸವ ಸಮಿತಿ ಮಂಗಳೂರು ಇದರ ವತಿಯಿಂದ ಮೇ 20ರಂದು ಅಪರಾಹ್ನ 3ಕ್ಕೆ ನಗರದ ಪಿವಿಎಸ್ ವೃತ್ತದಿಂದ ಕರಾವಳಿ ಉತ್ಸವ ಮೈದಾನದ ತನಕ ಮೆರವಣಿಗೆ ಮತ್ತು ಸಂಜೆ 5ಕ್ಕೆ ಅದೇ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ ಎಂದು ವಿಜಯೋತ್ಸವ ಸಮಿತಿ ಸಂಚಾಲಕ ಕೇಶವ ನಂದೋಡಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಸೇನಾಪಡೆ ಗಳು ಮತ್ತು ಯೋಧರ ಶೌರ್ಯ-ಪರಾಕ್ರಮವನ್ನು ಅಭಿನಂದಿಸಿ ಅವರಿಗೆ ಬೆಂಬಲ ನೀಡಿ ಗೌರವಿಸುವ ಉದ್ದೇಶದಿಂದ ಈ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿಯ ಸಿಎ ಶಾಂತಾರಾಮ ಶೆಟ್ಟಿ, ಗುರುದತ್‌ನಾಯಕ್ ಉಪಸ್ಥಿತರಿದ್ದರು.
Next Story





