ಡಿ. 20-23: ಕುಂಬ್ರದಲ್ಲಿ 4ನೇ ಸನದುದಾನ ಮಹಾ ಸಮ್ಮೇಳನ

ಪುತ್ತೂರು: ಕಳೆದ 27 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನಿರ್ವಹಿಸುತ್ತಿರುವ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಇದರ 4ನೇ ಸನದುದಾನ ಮಹಾ ಸಮ್ಮೇಳನವು ಡಿ.20 ರಿಂದ 23 ರ ತನಕ ಕುಂಬ್ರ ಕೆಐಸಿ ಮೈದಾನದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಕನ್ವೀನರ್ ಅನೀಸ್ ಕೌಸರಿ ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.23 ರಂದು ಸಂಜೆ ನಡೆಯಲಿರುವ ಸನದುದಾನ ಸಮ್ಮೇಳನದಲ್ಲಿ ಧಾರ್ಮಿಕ ವಿದ್ವಾಂಸರು ಹಾಗೂ ಖುರಾನ್ ಕಂಠಪಾಠ ಮಾಡಿದ ಹಾಫಿಲ್‍ಗಳನ್ನು ಒಳಗೊಂಡ 98 ವಿದ್ವಾಂಸರಿಗೆ ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ಸನದು ಪ್ರಧಾನಿಸಲಿದ್ದಾರೆ.
ಡಿ. 20 ರಂದು ಬೆಳಗ್ಗೆ ಸಂಸ್ಥೆಯ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ `ಪ್ರವಾದಿ (ಸ.ಅ) ಅವರ ಮತ್ತು ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳ ನಿವಾರಣೆ ಹಾಗೂ ಆಧುನಿಕ ಆರ್ಥಿಕ ಮತ್ತು ವೈದ್ಯಕೀಯ ವಿಧಾನಗಳ ಕರ್ಮಶಾಸ್ತ್ರ ವಿಧಿ ಎಂಬ ವಿಷಯಗಳಲ್ಲಿ ಗೋಷ್ಠಿ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿ ವಹಿಸಲಿದ್ದಾರೆ. ಸೈಯದ್ ಅಲಿ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ದಾರುಲ್ ಹುದಾ ಇಸ್ಲಾಮಿಕ್ ವಿವಿ ಪ್ರೊ. ಕೆ.ಸಿ. ಮುಹಮ್ಮದ್ ಬಾಖವಿ ಮತ್ತು ಜಾಫರ್ ಹುದವಿ ವಿಷಯ ಮಂಡಿಸಲಿದ್ದಾರೆ.
ಡಿ. 21 ರಂದು ಅಪರಾಹ್ನ ನವೀಕೃತ ಲೈಬ್ರರಿ ಹಾಗೂ ಸಿವಿಲ್ ಸರ್ವೀಸ್ ತರಬೇತಿ ಕೊಠಡಿ ಉದ್ಘಾಟನೆ ನಡೆಯಲಿದೆ. ಯೂಸುಫ್ ಹಾಜಿ ಮೇನಾಲ ಅಧ್ಯಕ್ಷತೆ ವಹಿಸಲಿದ್ದಾರೆ. ಸೆಯ್ಯದ್ ಅಲಿ ತಂಙಳ್ ಕುಂಬೋಲ್, ಸ್ವಾಬಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಯು.ಟಿ. ಇಫ್ತಿಕಾರ್ ಫರೀದ್, ಶಾಹಿದ್ ತಿರುವಳ್ಳೂರ್, ಮುಸ್ತಫಾ ಭಾರತ್, ಜಿ.ಎ.ಬಾವಾ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಇಬ್ರಾಹಿಂ ಬಾತಿಷಾ ತಂಗಳ್ ಆನೆಕ್ಕಲ್ ಅವರ ನೇತೃತ್ವದಲ್ಲಿ ಜಲಾಲಿಯ್ಯತ್ ರಾತೀಬು ಹಾಗೂ ಆಬೂಬಕ್ಕರ್ ಸಿದ್ದೀಖ್ ಅಝ್ಹರಿ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಡಿ.22 ಸಂಜೆ ವಿದ್ಯಾರ್ಥಿಗಳ ಸಾಹಿತ್ಯಾತ್ಮಕ ಕಾರ್ಯಕ್ರಮಗಳು ನಡೆಯಲಿದೆ. ಬಳಿಕ `ಸ್ನೇಹ ಸಂಗಮ' ಕಾರ್ಯಕ್ರಮ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಶಾಸಕರಾದ ಪ್ರದೀಪ್ ಈಶ್ವರ್, ಎನ್.ಎ. ನೆಲ್ಲಿಕುನ್ನು, ಮಾಜಿ ಸಚಿವರಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ. ರಾತ್ರಿ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಇವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಡಿ. 23 ಮಧ್ಯಾಹ್ನ `ಕುಟುಂಬ ಸಂಗಮ' ನಡೆಯಲಿದೆ. ಕೆ.ಪಿ. ಮುಹಮ್ಮದ್ ಸ್ವಾದಿಖ್ ಅಧ್ಯಕ್ಷತೆ ವಹಿಸಲಿದ್ದಾರೆಖಾದಂ ದಾರಿಮಿ ಆದೂರು ಉದ್ಘಾಟಿಸಲಿದ್ದಾರೆ. ಶಾಜು ಶಮೀರ್ ಅಝ್ಹರಿ, ರಫೀಕ್ ಮಾಸ್ತರ್ ಆತೂರು ವಿಷಯ ಮಂಡನೆ ಮಾಡಲಿದ್ದಾರೆ.
ಡಿ.23ರಂದು ಸಂಜೆ ಸನದುದಾನ ಮಹಾಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ವಕ್ಫ್ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಭಾಗವಹಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಕೆ.ಪಿ. ಅಹಮದ್ ಹಾಜಿ ಆಕರ್ಷಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕ ಸಯ್ಯದ್ ಅಲಿ ಕಂಬಳ ಕುಂಬೋಲ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರದ ಸೆಯ್ಯದ್ ಝೈನುಲ್ ಆಬಿದಿನ್ ತಂಙಳ್ ದುಗ್ಗಲಡ್ಕ ದುವಾ ನೆರವೇರಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕ ಸೆಯ್ಯದ್ ಅಲಿ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಲಾಂ ಬಾಖವಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಐಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಬಾವಾ ಹಾಜಿ ಕೂರ್ನಡ್ಕ, ಸ್ವಾಗತ ಸಮಿತಿ ಅಧ್ಯಕ್ಷ ಆಶ್ರಫ್ ಷಾ ಮಾಂತೂರು, ವ್ಯವಸ್ಥಾಪಕ ಅಬ್ದುಲ್ ಸತ್ತಾರ್ ಕೌಸರಿ, ಪ್ರಾಧ್ಯಾಪಕ ಅಝ್ಮತುಲ್ಲಾ ಹುದವಿ ಉಪಸ್ಥಿತರಿದ್ದರು.







