ವಿಟ್ಲ: ಜುಲೈ 20ರಿಂದ ಸಿಪಿಐ 25ನೇ ಜಿಲ್ಲಾ ಸಮ್ಮೇಳನ

ವಿಟ್ಲ: ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ದ.ಕ ಜಿಲ್ಲೆ ಇದರ 25ನೇ ಜಿಲ್ಲಾ ಸಮ್ಮೇಳನ ಜುಲೈ 20ರಿಂದ 22ರ ವರೆಗೆ ವಿಟ್ಲದಲ್ಲಿ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್ ಅವರು ತಿಳಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಭಾರತ ಕಮ್ಯುನಿಸ್ಟ್ ಪಕ್ಷ ಭಾರತದ ಮೊಟ್ಟ ಮೊದಲು ಕಮ್ಯುನಿಸ್ಟ್ ಪಕ್ಷವಾಗಿದೆ. 1925ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಮಹಾ ಧಿವೇಶನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಉದಯವಾಗಿದೆ. ಪಕ್ಷ ಕಾರ್ಮಿಕರ, ರೈತರ , ಹಿಂದುಳಿದವರ ಹಾಗೂ ಬಡವರ ಏಳಿಗೆಗಾಗಿ ಶ್ರಮಿಸುತ್ತ ಬಂದಿದೆ. 2025 ಡಿಸೆಂಬರ್ 26ಕ್ಕೆ 100 ವರ್ಷ ಪೂರೈಸುತ್ತಿ ರುವ ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯನ್ನು ವರ್ಷವಿಡಿ ಆಚರಿಸುತ್ತಿದೆ ಎಂದರು.
ದ.ಕ ಕಮ್ಯೂನಿಸ್ಟ್ ಪಕ್ಷದ ಮತ್ತೊಬ್ಬ ಮಹಾನ್ ನಾಯಕ ವಿಟ್ಲದವರೇ ಆದ ಕೆ ದಾಸಪ್ಪ ಮಾಸ್ಟರ್ ರವರು ವಿಟ್ಲ ಸೀಮೆಯಲ್ಲಿ ಬೀಡಿ ಮತ್ತು ಇತರ ಕಾರ್ಮಿಕ ಸಂಘಟನೆ ಕಟ್ಟಿ ಅಲ್ಲಿ ಪಕ್ಷವನ್ನು ಬೆಳೆಸಿರುವ ಮಾಸ್ಟರ್, ವಿಟ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಬಿ ವಿ ಕಕ್ಕಿಲ್ಲಾಯರು ಆರಿಸಿ ಬರುವಲ್ಲಿ ಮುಖ್ಯ ಪಾತ್ರ ವಹಿಸಿದವರು. ಅವರ ಹಾದಿಯಲ್ಲಿ ಮುಂದುವರಿದ ಎನ್ ಎ ಹಮೀದ್ ಕಾರ್ಮಿಕ ಸಂಘಟನೆ ಎಐಟಿಯುಸಿ ಹಾಗೂ ಸಿಪಿಐ ಪಕ್ಷವನ್ನು ವಿಟ್ಲ ಸೀಮೆಯಲ್ಲಿ ಬೆಳೆಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಅವರುಗಳ ನೆನಪಿಗಾಗಿ ಸಮ್ಮೇಳನದ ವೇದಿಕೆ ಮತ್ತು ದ್ವಾರ ವನ್ನು ಅವರಿಗೆ ಅರ್ಪಿಸಲಾಗಿದೆ ಎಂದರು.
ಜುಲೈ 20 ಮತ್ತು 21 ರ ವರೆಗೆ ಒಕ್ಕೆತ್ತೂರು ರಾಯಲ್ ಹಾಲ್ ನಲ್ಲಿ ಪ್ರತಿನಿಧಿ ಸಮ್ಮೇಳನ ನಡೆಯಲಿದ್ದು, ಜುಲೈ 22ರಂದು ವಿಟ್ಲದಲ್ಲಿ ಸಾವಿರಾರು ಸದಸ್ಯರ, ಕಾರ್ಮಿಕರ, ರೈತರ ಕೂಡುವಿಕೆಯಲ್ಲಿ ಆಕರ್ಷಕ ವರ್ಣ ರಂಜಿತ ಮೆರವಣಿಗೆ ವಿಟ್ಲ ಪೇಟೆಯಲ್ಲಿ ನಡೆದು ಬಹಿರಂಗ ಸಭೆಯೊಂದಿಗೆ ಸಮಾಪನಗೊಳ್ಳಲಿದೆ. ವಿಟ್ಲ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯುವ ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವೈದ್ಯರಾದ ಡಾ. ಬಿ ಶ್ರೀನಿವಾಸ ಕಕ್ಕಿಲ್ಲಾಯ, ಸಿಪಿಐ ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ವಿ ಕುಕ್ಯಾನ್, ಹೆ.ಚ್ ವಿ ರಾವ್, ಶಶಿಕಲ ಗಿರೀಶ್ , ವಿ.ಎಸ್ ಬೇರಿಂಜ, ಶಿವಾನಂದ ಉಡುಪಿ ಮೊದಲಾದ ವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್, ಜಿಲ್ಲಾ ಸಹಕಾರ್ಯದರ್ಶಿ ವಿ.ಎಸ್ ಬೇರಿಂಜ, ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಮುಗೇರ ಉಪಸ್ಥಿತರಿದ್ದರು.







