ಮಿತ್ತಬೈಲ್ : "ಮುಸಾಬಖ-2023" ಕಾರ್ಯಕ್ರಮ

ಬಂಟ್ವಾಳ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಮಿತ್ತಬೈಲ್ ರೇಂಜ್ ಹಾಗೂ ಮದ್ರಸ ಮೆನೇಜ್ಮೆಂಟ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿತ್ತಬೈಲ್ ರೇಂಜ್ ಮದ್ರಸಗಳ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ನಡೆಸುವ ಕಲಾ ಸಾಹಿತ್ಯ ಸ್ಪರ್ಧೆ "ಮುಸಾಬಖ-2023" ಕಾರ್ಯಕ್ರಮಕ್ಕೆ ಶನಿವಾರ ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲಿಯ ಖಿದ್ಮತುಲ್ ಇಸ್ಲಾಂ ಮದ್ರಸದ ಆವರಣದಲ್ಲಿ ಚಾಲನೆ ನೀಡಲಾಯಿತು.
ಮುಸಾಬಖ ಸ್ವಾಗತ ಸಮಿತಿ ಚೇರ್‌ಮೆನ್ ಹಾಜಿ ಮುಹಮ್ಮದ್ ಸಾಗರ್ ಶನಿವಾರ ಬೆಳಗ್ಗೆ ದ್ವಜಾರೋಹಣದೊಂದಿಗೆ ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮದ್ರಸ ಮೆನೆಜ್ಮೆಂಟ್ ಉಪಾಧ್ಯಕ್ಷ ಇಸ್ಮಾಯೀಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಉದ್ಘಾಟನಾ ಸಭೆಯನ್ನು ಪರ್ಲಿಯ ಅರಫಾ ಜುಮಾ ಮಸ್ಜಿದ್ ಖತೀಬ್ ಅಸ್ಸಯ್ಯದ್ ಬಾಸಿತ್ ಬಾ ಅಲವೀ ಅಲ್ ಅನ್ಸಾರಿ ಉದ್ಘಾಟಿಸಿದರು. ಎಸ್.ಕೆ.ಜೆ.ಎಂ. ಮಿತ್ತಬೈಲ್ ರೇಂಜ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಶುಭ ಹಾರೈಸಿದರು.
ಪರ್ಲಿಯ ಕಿದ್ಮತುಲ್ ಇಸ್ಲಾಂ ಮದ್ರಸ ಅಧ್ಯಕ್ಷ ಸಿದ್ದೀಖ್ ಹಾಜಿ, ಮದ್ರಸಮೆನೆಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು, ಸ್ವಾಗತ ಸಮಿತಿ ಕನ್ವಿನರ್ ಅಬ್ದುಲ್ಸಮ್ ಅನ್ಸಾರಿ, ವೈಸ್ ಕನ್ವಿನರ್ ರಫೀಕ್ ಅಸ್ಲಮಿ, ಅಬ್ದುಲ್ ರಶೀದ್ ಯಾಮಾನಿ ಪರ್ಲಿಯ ಕಿದ್ಮತುಲ್ ಇಸ್ಲಾಂ ಮದ್ರಸ ಉಪಾಧ್ಯಕ್ಷ ಸಾಹುಲ್ ಹಮೀದ್, ಮದ್ರಸಮೆನೇಜ್ಮೆಂಟ್ ಅಧ್ಯಕ್ಷ ಯೂಸುಪ್ ಬದ್ರಿಯಾ, ಪರೀಕ್ಷಾ ಬೋರ್ಡು ಚೇರ್‌ಮೆನ್ ಹಾಜ್ ಅಬ್ದುಲ್ ಮಜೀದ್ ಮದನಿ, ರೇಂಜ್ ಉಪಾಧ್ಯಕ್ಷ ಇಬ್ರಾಹಿಂ ದಾರಿಮಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಶನಿವಾರ ಕಿಡೀಸ್, ಸಬ್ ಜೂನಿಯರ್ ಹಾಗೂ ಮುಅಲ್ಲಿಂ ವಿಭಾಗದಲ್ಲಿ ಸುಮಾರು 200ಕ್ಕೂ ಮಿಕ್ಕ ಸ್ಪರ್ಧಾರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರೇಂಜ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಸ್ವಾಗತಿಸಿದರು. ನೌಶಾದ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.







