ಮಂಗಳೂರು ವಿವಿ ಕಾಲೇಜಿನಲ್ಲಿ ‘ನವೋತ್ಸವ -2023’ ಕಾರ್ಯಕ್ರಮ

ಮಂಗಳೂರು, ಡಿ.8: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಎಂ.ಕಾಂ ವಿಭಾಗದ ವತಿಯಿಂದ ನೂತನ ವಿದ್ಯಾರ್ಥಿಗಳಿಗೆ ‘ನವೋತ್ಸವ -2023’ ಎಂಬ ಪರಿಚಯ ಕಾರ್ಯಕ್ರಮ ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಅನಸೂಯ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ.ಎ.ಸಿದ್ದೀಕ್ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳ್ಳದೆ ವೃತ್ತಿ ಕೌಶಲಗಳನ್ನು ಕೂಡಾ ಮೈಗೂಡಿಸಿಕೊಳ್ಳಬೇಕು. ಉತ್ತಮ ಸಂವಹನ, ಆತ್ಮವಿಶ್ವಾಸ, ನಾಯಕತ್ವ ಗುಣಗಳು, ಸಂಶೋಧನಾ ಆಸಕ್ತಿ ಎಲ್ಲವೂ ಉತ್ತಮ ಉದ್ಯೋಗಕ್ಕೆ ರಹದಾರಿಯಾಗಿದೆ ಎಂದರು.
ಅತಿಥಿಯಾಗಿ ಪ್ರಾಧ್ಯಾಪಕಿ ಪ್ರೊ. ಸುಭಾಣಿ ಶ್ರೀವತ್ಸ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರೀಲಕ್ಷ್ಮಿಶಿಖಾ ಸ್ವಾಗತಿಸಿದರು. ಅರ್ಚನಾ ಟಿ. ವಂದಿಸಿದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.
Next Story





