ಮಂಗಳೂರು: ಬ್ಯಾರೀಸ್ ಫೆಸ್ಟಿವಲ್-2025ಕ್ಕೆ ತೆರೆ

ಮಂಗಳೂರು, ಎ.20: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಆರಂಭಗೊಂಡ ಬ್ಯಾರೀಸ್ ಫೆಸ್ಟಿವಲ್-2025 (ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವ)ಕ್ಕೆ ರವಿವಾರ ತೆರೆ ಬಿತ್ತು.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್‌ರ ಪರಿಕಲ್ಪನೆಯಡಿ ನಡೆದ ಬ್ಯಾರೀಸ್ ಫೆಸ್ಟಿವಲ್‌ನಲ್ಲಿ ಉದ್ಯೋಗ ಮೇಳದ ಜೊತೆಗೆ ಬಿಸಿನೆಸ್ ಮೀಟ್, ಎಜುಕೇಶನ್ ಮೇಳವು ಗಮನ ಸೆಳೆಯಿತು.
ಜಾತಿ, ಮತ, ಧರ್ಮಭೇದವಿಲ್ಲದೆ ನಡೆದ ಈ ಫೆಸ್ಟಿವಲ್‌ನಲ್ಲಿ ವೃತ್ತಿ ಮಾರ್ಗದರ್ಶನ, ವೈದ್ಯಕೀಯ ಮತ್ತು ರಕ್ತದಾನ ಶಿಬಿರ, ಮೆಹಂದಿ ಮತ್ತು ಅಡುಗೆ ಸ್ಪರ್ಧೆ, ಮಹಿಳಾ ವಿಚಾರಗೋಷ್ಠಿ, ಕವಿಗೋಷ್ಠಿಗಳು, ಬಾಲ ಪ್ರತಿಭೆ ಮತ್ತು ಕ್ವಿಝ್ ಸ್ಪರ್ಧೆ, ಹಾಸ್ಯ ಮತ್ತು ದಫ್ ಹಾಗೂ ಬಹುಭಾಷಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿನ್ನು ಗೌರವಿಸಲಾಯಿತು.
Next Story