ರೋಶನಿ ನಿಲಯದಲ್ಲಿ ‘‘ಎಕ್ಸ್ಪ್ರೆಷನ್ಸ್ 2025 - ಲೆಜೆಂಡ್ಸ್ ರೀಬೋರ್ನ್ ಸಮಾರೋಪ

ಮಂಗಳೂರು, ಸೆ,25: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಕಾಲೇಜು ಆಯೋಜಿಸಿದ್ದ 25ನೇ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ ‘‘ಎಕ್ಸ್ಪ್ರೆಷನ್ಸ್ 2025 - ಲೆಜೆಂಡ್ಸ್ ರೀಬೋರ್ನ್ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ಬಹುಭಾಷಾ ನಟರಾದ ಸ್ವರಾಜ್ ಶೆಟ್ಟಿ, ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ತಮ್ಮ ಪ್ರತಿಭೆಯನ್ನು
ಪ್ರದರ್ಶಿಸಬೇಕು. ವಿದ್ಯೆಯೊಂದಿಗೆ ನಮ್ಮಲ್ಲಿರುವ ಇತರ ಪ್ರತಿಭೆಗಳು ನಮ್ಮ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗ ಬಲ್ಲುದು ಎಂದರು. ಪರಿಶ್ರಮ, ವಿನಯಶೀಲತೆ ಹಾಗೂ ಧೈರ್ಯವು ಯಶಸ್ಸಿಗೆ ದಾರಿ ತೋರುತ್ತವೆ ಎಂದು ಹೇಳಿದರು.
ಪದವಿ ವಿಭಾಗದ ಡೀನ್ ಪ್ರೊ. ಸ್ಯಾಂಡ್ರ ಸುನಿತಾ ಲೋಬೊ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಡಾ. ಒಲಿಂಡಾ ಪಿರೇರಾ ಅವರು ಎಲ್ಲಾ ಶತಮಾನದಲ್ಲೂ ಬೆಳಗುವ ನಕ್ಷತ್ರವೆಂದು ಸ್ಮರಿಸಿದರು, ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸೃಜನಶೀಲತೆಯಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಾರಿಕ್ ಅಂಕಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಿಸ್. ಬ್ರಿನೆಲ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಿಸ್.ಇನಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮಿಸ್. ಇಶಿಕಾ ರೈ ವಂದಿಸಿದರು.
ಯೆನೆಪೋಯ (ಪರಿಗಣಿತ ವಿಶ್ವವಿದ್ಯಾಲಯ) ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು, ಪೂರ್ಣಪ್ರಜ್ಞ ಕಾಲೇಜು ಉಡುಪಿ ರನ್ನರ್-ಅಪ್ ಟ್ರೋಫಿಯನ್ನು ಪಡೆದುಕೊಂಡಿತು. ಈ ಸ್ಪರ್ಧೆಗಳಲ್ಲಿ 23 ಕಾಲೇಜುಗಳು ಭಾಗವಹಿಸಿದ್ದವು.







