ಖೇಲೋ ಇಂಡಿಯಾ-2025: ಚಿಂತನ್ ಶೆಟ್ಟಿಗೆ 2 ಚಿನ್ನ, 4 ಬೆಳ್ಳಿ ಪದಕ

ಮಂಗಳೂರು, ಮೇ 12: ಖೇಲೋ ಇಂಡಿಯಾ 2025ರಲ್ಲಿ ಭಾಗವಹಿಸಿದ ಮಂಗಳೂರು ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಚಿಂತನ್ ಎಸ್. ಶೆಟ್ಟಿ ಈಜು ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಮೇ 5ರಿಂದ ಮೇ 9ರವರೆಗೆ ಬಿಹಾರದ ಗಯಾದಲ್ಲಿ ಖೇಲೋ ಇಂಡಿಯಾ 2025 ನಡೆದಿತ್ತು. ಬೆಂಗಳೂರಿನ ಸರ್ಜಾಪುರದ ಲಕ್ಷ್ಮನ್ ಅಕಾಡಮಿ ಆಫ್ ಸ್ಪೋರ್ಟ್ಸ್‌ನ ಕೋಚ್, ನಿರೂಪ್ ಮತ್ತು ರೋಹಿತ್ ಅವರಿಂದ ತರಬೇತಿ ಪಡೆಯುತ್ತಿರುವ ಚಿಂತನ್ ಶೆಟ್ಟಿ ಅವರು ಶಶಿಧರ್ ಶೆಟ್ಟಿ ಮತ್ತು ಹರಿಣಾಕ್ಷಿ ಶೆಟ್ಟಿಯ ಪುತ್ರ.
Next Story





