ಕುಪ್ಪೆಪದವು : ಸಹೋದರತ್ವದ ಸಮಾಗಮ 2025

ಮಂಗಳೂರು : ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ ವತಿಯಿಂದ ಸಹೋದರತ್ವದ ಸಮಾಗಮ 2025 ಕುಪ್ಪೆಪದವಿನ ಮಾಝರಾ ಗಾರ್ಡನ್ ನಲ್ಲಿ ನೇರವೇರಿತು.
ಕಾರ್ಯಕ್ರಮವನ್ನು ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಆ ಮೂಲಕ ಉದ್ಘಾಟಿಸಿದರು.
ಈ ವೇಳೆ ಅನುಗ್ರಹ ಟ್ರೈನಿಂಗ್ ಕಾಲೇಜ್ ಮುಡಿಪು, ಬೆಳ್ತಂಗಡಿ ನಿರ್ದೇಶಕ, ಇನ್ಫಾರ್ಮೇಟ್ ಫೌಂಡೇಶನ್ (ರಿ) ಕರ್ನಾಟಕ ಸಂಸ್ಥಾಪಕರಾದ ಅಬ್ದುಲ್ ಖಾದರ್ ನಾವೂರ್ ವಿದ್ಯಾರ್ಥಿಗಳ ಜೀವನ ಮತ್ತು ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಕೂಟ, ಮನೋರಂಜನಾ ಕಾರ್ಯಕ್ರಮ ನಡೆಸಿ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಅಧ್ಯಕ್ಷರಾದ ಇಕ್ಬಾಲ್ A.P., ಉಪಾಧ್ಯಕ್ಷರಾದ ರಝಾಕ್ A.R. , ಸದರ್ ಉಸ್ತಾದ್ ಜುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಕಾರ್ಯದರ್ಶಿ ಸಜುದ್ದೀನ್, ಜೊತೆ ಕಾರ್ಯದರ್ಶಿ ಆರೀಫ್, ಬದ್ರಿಯಾ ಯಂಗ್ ಮೆನ್ಸ್ ಸದಸ್ಯ ಆಶಿಕ್, ಎಸ್ಕೆಎಸ್ಬಿವಿ ಅಧ್ಯಕ್ಷ ಮೊಹಮ್ಮದ್ ಅನಸ್, ಆಡಳಿತ ಮಂಡಳಿ ಸದಸ್ಯರಾದ ಮನ್ಸೂರ್, ಇಕ್ಬಾಲ್, ಮಾಜಿ ಅಧ್ಯಕ್ಷ ಸೈಫುದ್ದೀನ್, ಮಾಜಿ ಸದಸ್ಯರಾದ ಇಕ್ಬಾಲ್ ಸಿ ಹೆಚ್, ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.







