Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬಂಟ್ವಾಳ: ಫೆ.22ರಂದು ಮಿತ್ತಬೈಲ್ ಉರೂಸ್

ಬಂಟ್ವಾಳ: ಫೆ.22ರಂದು ಮಿತ್ತಬೈಲ್ ಉರೂಸ್

ವಾರ್ತಾಭಾರತಿವಾರ್ತಾಭಾರತಿ11 Feb 2025 8:14 PM IST
share
ಬಂಟ್ವಾಳ: ಫೆ.22ರಂದು ಮಿತ್ತಬೈಲ್ ಉರೂಸ್

ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ನ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಹಝ್ರತ್ ಶೈಖ್ ವಲಿಯುಲ್ಲಾಹಿ (ಖ.ಸಿ) ರವರ ಹೆಸರಿನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್‌ ಫೆ. 22ರಂದು ನಡೆಯಲಿದೆ ಎಂದು ಮಿತ್ತಬೈಲ್ ಮುಹಿಯ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಅದ್ದೇಡಿ ತಿಳಿಸಿದರು.

ಉರೂಸ್ ಕಾರ್ಯಕ್ರಮವು ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾ ಅಧ್ಯಕ್ಷರು ಹಾಗೂ ಮಿತ್ತಬೈಲ್ ಖಾಝಿ ಸಯ್ಯದುಲ್ ಉಲೆಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್‌ ಕಾರ್ಯಕ್ರಮದ ನೇತೃತ್ವದಲ್ಲಿ ನಡೆಯಲಿ ರುವುದು. ಫೆ.14 ರಿಂದ 22 ರ ತನಕ ಪ್ರಸಿದ್ದ ವಿದ್ವಾಂಸರುಗಳಿಂದ ಧಾರ್ಮಿಕ ಮತ ಪ್ರಬಾಷಣ ನಡೆಯಲಿರುವುದು.

ಫೆ. 14 ರಂದು ರಾತ್ರಿ 8.30 ಕ್ಕೆ ಮಂಗಳೂರು ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಿತ್ತಬೈಲ್ ಮುದರ‍್ರಿಸ್ ಉಮರುಲ್ ಫಾರೂಖ್ ಫೈಝಿ ದುಆ ನೆರವೇರಿಸುವರು. ಮುಹಿಯ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಅದ್ದೇಡಿ ಅಧ್ಯಕ್ಷತೆ ವಹಿಸುವರು.

ಮಿತ್ತಬೈಲ್ ಜುಮಾ ಮಸೀದಿ ಖತೀಬ್ ಕೆ.ಎಂ.ಅಬ್ಬಾಸ್ ಫೈಝಿ ಹಾಗೂ ಶೈಖುನಾ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯ್ಯೂಡ್ ಮುಖ್ಯ ಪ್ರಭಾಷಣ ನಡೆಸಲಿದ್ದು, ಇರ್ಶಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್ ಪ್ರಸ್ತಾವಿಕ ಭಾಷಣ ಮಾಡಲಿರುವರು ಎಂದವರು ವಿವರಿಸಿದರು.

ಪ್ರತಿದಿನ ರಾತ್ರಿ ವಿದ್ವಾಂಸರುಗಳಾದ ಖಲೀಲ್ ಹುದವಿ ಕಾಸರಗೋಡು, ಅನ್ವರ್ ಮುಹೀನುದ್ದೀನ್ ಹುದವಿ, ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಕ್ಕಿಂಜೆ , ಹಾಫಿಲ್ ಅನ್ವರ್ ಮನ್ನಾನಿ ತೊಡುಪ್ಪುಯ, ಇಕ್ಬಾಲ್ ದಾರಿಮಿ ಕೊಲ್ಲಂ ಮೇಲಾಟ್ಟೂರ್, ಅಶ್ಫಾಕ್ ಫೈಝಿ ನಂದಾವರ, ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಧಾರ್ಮಿಕ ಪ್ರವಚನ ನೀಡಲಿದ್ದು, ಪ್ರತೀ ದಿನದ ಕಾರ್ಯಕ್ರಮಗಳಲ್ಲಿ ಸಾದಾತುಗಳಾದ, ಅಸ್ಸಯ್ಯದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, , ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಶೈಖುನಾ ಉಸ್ಮಾನ್ ಫೈಝಿ ತೋಡಾರು, ಶೈಖುನಾ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು, ಸಯ್ಯದ್ ಅಲೀ ತಂಙಳ್ ಕುಂಬೋಳ್, ಇವರುಗಳು ದುವಾಃ ಅಶೀರ್ವಚನ ನೀಡಲಿದ್ದಾರೆ.

ಫೆ.16 ರಂದು ಅಸ್ಸೆಯ್ಯದ್ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್, ಫೆ.20 ರಂದು ಶೈಖುನಾ ಅಬ್ದುಲ್‌ಖಾದರ್‌ಅಲ್ ಖಾಸಿಮಿ ಬಂಬ್ರಾಣ‌ ಉಸ್ತಾದ್ ಇವರುಗಳ ನೇತೃತ್ವದಲ್ಲಿ ಮಜ್ಲಿಸುನ್ನೂರು ಕಾಯ೯ಕ್ರಮ ನಡೆಯಲಿದೆ, ಹಾಗೂ ಫೆ.22 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮದ ಅಂಗವಾಗಿ ಸಂಜೆ 4.30 ಕ್ಕೆ ಉರೂಸ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಅದ್ದೇಡಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು, ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ವಖ್ಫ್ ಸಚಿವ ಜನಾಬ್ ಬಿ.ಝಡ್ ಝಮೀರ್ ಅಹಮದ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ಬಿ.ರಮಾನಾಥ ರೈ, ಮೊಡಂಕಾಪು ಚರ್ಚ್ ನ ಮುಖ್ಯ ಧರ್ಮಗುರು ರೆ| ಫಾ| ವಲೇರಿಯನ್ ಡಿ'ಸೋಜ ಪ್ರಮುಖರಾದ ಬಿ.ಕೆ.ಹರಿಪ್ರಸಾದ್, ಯ.ಟಿ.ಇಫ್ತಿಕಾರ್ ಅಹ್ಮದ್ ಆಲಿ, ವಾಸು ಪೂಜಾರಿ, ಬೇಬಿ ಕುಂದರ್, ಇನಾಯತ್ ಆಲಿ ಜನಾಬ್ ಬಿ.ಎಂ. ಶರೀಫ್, ಮೂನೀಸ್ ಆಲಿ, ಎಸ್. ಮುಹಮ್ಮದ್ ಶೆರೀಫ್ , ಹಸೈನಾರ್ ತಾಳಿಪಡ್ಪು, , ಮುಹಮ್ಮದ್ ಶರೀಫ್, ಮುಹಮ್ಮದ್ ನಂದರಬೆಟ್ಟು, ಲುಕ್ಮಾನ್ ಕೈಕಂಬ, ರಾಮಕೃಷ್ಣ ಆಳ್ವ, ಲೋಲಾಕ್ಷ ಶೆಟ್ಟಿ, ಮೈಸೂರು, ರಿಯಾಝ್ ಫರಂಗಿಪೇಟೆ, ಅಬ್ದುಲ್ ಲತೀಫ್ ಗುರುಪುರ, ಅಬ್ದುಲ್ ಹಮೀದ್ ಬಿ.ಎ., ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲ್, ಬಿ.ಎ. ಅಬ್ದುಲ್ ಸಲಾಂ ತುಂಬೆ. ಹಾಜಿ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಬೂಬಕ್ಕರ್, ಅಮಾನುಲ್ಲಾ ಬಂಟ್ವಾಳ, ವಿಜಯ ಪ್ರಸಾದ್ , ಅಬ್ಬಾಸ್ ವಳಾಲು, ಡಾ. ಅಬ್ದುಲ್ ಬಶೀರ್, ಅನಂತ ಪದ್ಮನಾಭ, ಸತೀಶ್, ಹಂಝ ಬಸ್ತಿಕೋಡಿ, ಮುಹಮ್ಮದ್ ನಾಸಿರ್, ಲಿಯೋ ಫೆರ್ನಾಂಡಿಸ್, ಇಸಾಕ್ ಪಲ್ಲಮಜಲು, ಸಿದ್ದೀಖ್ ಮಿತ್ತಬೈಲ್, ರಫೀಕ್ ಹುದವಿ ಕೋಲಾರಿ, ಉಬೈದುಲ್ಲಾ ಅಝ್ಹರಿ, ಹಬೀಬು ರಹ್ಮಾನ್, ಮೊಯ್ದಿನ್ ಹಾಜಿ, ಇಬ್ರಾಹೀಂ ಮುಸ್ಲಿಯಾರ್ ಕುಮೇರು ಮುಂತಾದ ಗಣ್ಯರು ಬಾಗವಹಿಸಲಿದ್ದಾರೆ.

ಅದೇ ದಿನ ರಾತ್ರಿ 9.00 ಕ್ಕೆ ಮಿತ್ತಬೈಲ್‌ ಖಾಝಿ ಸೆಯ್ಯದುಲ್‌ ಉಲೆಮಾ ಅಸ್ಸೆಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್‌ ದು:ಹಾಶೀರ್ವಚನಗೈಯಲಿದ್ದು, ಅಬ್ದುಲ್ ಅಝಿಝ್ ಅಶ್ರಫಿ ಪಾನತ್ತೂರು ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಹಾಗೂ ಹಲವಾರು ಉಲೆಮಾ, ಉಮರಾ, ಸಾದಾತುಗಳು, ಸೂಫಿವರ್ಯರು, ಸಮಾಜಿಕ ಕಾರ್ಯ ಕರ್ತರು ಭಾಗವಹಿಸಲಿದ್ದಾರೆ, ರಾತ್ರಿ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜುಮಾ ಮಸೀದಿ ಪ್ರಧಾನ ಕಾರ್ಯದಶಿ೯ ಅಕ್ಬರ್ ಆಲಿ ಪೊನ್ನೋಡಿ ಉಪಾಧ್ಯಕ್ಷ ಜಮಾಲುದ್ದೀನ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಉರೂಸ್ ಕಮಿಟಿ ಉಪಾಧ್ಯಕ್ಷ ಡಿ.ಪಿ.ಸಿದ್ದೀಕ್ ಹಾಜಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X