ಬೋಳಿಯಾರ್: ಫೆ.22ರಂದು ನವೀಕೃತ ಮಸೀದಿ ಉದ್ಘಾಟನೆ

ಕೊಣಾಜೆ: ಬೋಳಿಯಾರಿನ ಮೊಯಿದ್ದೀನ್ ಜುಮ್ಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನೆ ಫೆ.22ರ ಮಗ್ರಿಬ್ ನಮಾಝ್ ಬಳಿಕ ನಡೆಯಲಿದ್ದು ,ಈ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ವು ಫೆ.21 ರಿಂದ ಫೆ.23 ವರೆಗೆ ನಡೆಯಲಿದೆ ಎಂದು ಬೋಳಿಯಾರ್ ಮಸೀದಿ ಖತೀಬ್ ಅಬೂಬಕ್ಕರ್ ರಿಯಾಝ್ ರಹ್ಮಾನಿ ಹೇಳಿದರು.
ಬೋಳಿಯರ್ ನಲ್ಲಿ ಗುರುವಾರ ನಡೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಫೆ.21 ರಂದು ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್, ಇಂಡಿಯಾನಾ ಆಸ್ಪತ್ರೆಯ ಡಾ.ನಿಝಾಮ್, ಡಾ.ಯು.ಕೆ.ಮೋನು ಕಣಚೂರು, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಎಸ್ ಎಂಆರ್ ರಶೀದ್ ಹಾಜಿ, ಶೌಕತ್ ಶೂರಿ, ಹಾಜಿ ಕೆ.ಎ.ಮುನೀರ್ ಬಾವಾ, ತಾ.ಪಂ.ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ರಶೀದ್ ಇಂಜಿನಿಯರ್, ಮುನೀರ್ ಅಹ್ಮದ್ ಬಂಡಸಾಲೆ, ಟಿ.ಆರ್.ಅಬ್ದುಲ್ ಖಾದರ್ ಹಾಜಿ ತಾಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಫೆ. 22 ರಂದು ಶನಿವಾರ ಮಗ್ರಿಬ್ ನಮಾಝ್ ಬಳಿಕ ನವೀಕೃತ ಮಸೀದಿ ಉದ್ಘಾಟನೆ ನಡೆಯಲಿದೆ. ಸಯ್ಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಪ್ರಿ ಮುತ್ತುಕೋಯ ತಂಙಳ್ ಮಸೀದಿ ಉದ್ಘಾಟನೆ ಹಾಗೂ ದುಆ ಆಶೀರ್ವಚನ ನೆರವೇರಿಸಲಿದ್ದಾರೆ.
ಎಸ್ ಕೆ ಎಸ್ ಎಸ್ ಎಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಭಾಗವಹಿಸಲಿದ್ದಾರೆ.
ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ ರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಯ್ಯಿದ್ ಅಮೀರ್ ತಂಙಳ್ ದುಆ ನೆರವೇರಿಸಲಿದ್ದಾರೆ. ಸಯ್ಯದ್ ಆಮಿರ್ ಅಸ್ಸಖಾಫ್ ತಂಙಳ್ , ಡಾ.ಯು.ಟಿ.ಇಫ್ತಿಕರ್ ಅಲಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ.ಅಬೂಬಕರ್ ಅಬ್ದುಲ್ ರಹಿಮಾನ್ ಕೋಡಿಜಾಲ್, ಅಬೂಬಕ್ಕರ್ ಸ್ವಾಗತ್ ಹಾಜಿ ಅಬೂಬಕ್ಕರ್ ನಾಟೆಕಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಫೆ 23 ರಂದು ಬೆಳಿಗ್ಗೆ 11 ಗಂಟೆಗೆ ಶಂಶುಲ್ ಉಲಮಾ ಮೌಲೀದ್ ಹಾಗೂ ಸಮಸ್ತ ನೇತಾರರ ಸಂಗಮ ನಡೆಯಲಿದ್ದು, ಮಧ್ಯಾಹ್ನ ಸಾಮೂಹಿಕ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಜಮಾತ್ ಅಧ್ಯಕ್ಷರಾದ ಪಿ.ಕೆ.ಅಬ್ದುಲ್ಲಾ ಕಾಪಿಕಾಡ್ , ಮಾಜಿ ತಾಲೂಕು ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಶುಕೂರ್ , ಪ್ರಧಾನ ಕಾರ್ಯದರ್ಶಿ ಎಂ.ಎಸ್ .ಯುಸೂಫ್, ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಬಿ.ಎಂ.ಹನೀಪ್, ಸದಸ್ಯರಾದ ಹಾರೀಸ್ ಕಾಪಿಕಾಡ್, ಅಝೀಜ್ ಮದಕ ಉಪಸ್ಥಿತರಿದ್ದರು.