ಫೆ. 22 - 23: ‘ವಿಷನ್ 2025’- ‘ಸಾನಿಧ್ಯ ಉತ್ಸವ’
ಮಂಗಳೂರು, ಫೆ.19: ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯಲ್ಲಿ ಫೆ.23ರಿಂದ 23ರ ತನಕ ‘ವಿಷನ್ -2025 ’-ಸಾನಿಧ್ಯ ಉತ್ಸವ ನಡೆಯಲಿದೆ.
ಶಾಲೆಯ ವಿಶೇಷ ಮಕ್ಕಳಿಂದ ಫೆ.23ರಂದು ಸಂಜೆ 5ಕ್ಕೆ ಕದ್ರಿ ಉದ್ಯಾನದ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ. 22ರಂದು ಸಂಜೆ ಘಂಟೆ 5.30ಕ್ಕೆ ಸರಿಯಾಗಿ ಸಾನಿಧ್ಯ ವಿಶೇಷ ಮಕ್ಕಳು ತರಬೇತಿದಾರರ ನೆರವಿನಿಂದ ಹಾಗೂ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ (ಎಂಡೋಸಲ್ಫಾನ್ ಪೀಡಿತರಿಗಾಗಿ) ಉಜಿರೆ ಇವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ವಿಷನ್- 2025 ಉದ್ಘಾಟನೆಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿಯಾಗಿರುವ ಮನೀಶ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಫೆ. 23ರಂದು ಸಾನಿಧ್ಯ ಉತ್ಸವವನ್ನು ಬೆಂಗಳೂರಿನ ಕ್ರಾಪ್ಟಿಸನ್ ಫೌಂಡೇಶನ್‌ನ ಸಂಸ್ಥಾಪಕರು ಮತ್ತು ಸಿಇಒ ಮಯೂರ ಬಾಲಸುಬ್ರಮಣ್ಯನ್ ಉದ್ಘಾಟಿಸಲಿ ದ್ದಾರೆ. ಈ ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿನ ಶ್ರೀ ದೇಣುಕಾ ಎಲ್ಲಮ್ಮ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯ ಸಂಸ್ಥಾಪಕರಾದ ಎಚ್.ಆರ್. ಶಿವಕುಮಾರ್ ಹಾಗೂ ಮೈಸೂರಿನ ಮಾತೃಮಂಡಳಿ ಸಂಸ್ಥೆಯ ಶಿಶುವಿಕಾಸ ಕೇಂದ್ರದ ಆಡಳಿತಾಧಿಕಾರಿ ಪಾಂಡು ಬಿ.ವಿ. ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.