ಅಡ್ಯಾರ್ ಗುಡ್ಡದಲ್ಲಿ ಜಮೀಯ್ಯತುಲ್ ಫಲಾಹ್ ‘ಮುಲಾಕಾತ್-24’ ಕಾರ್ಯಕ್ರಮ

ಮಂಗಳೂರು, ಜ.28: ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಆಜೀವ ಸದಸ್ಯರ ಕುಟುಂಬ ಸಮ್ಮಿಲನ ‘ಮುಲಾಕಾತ್-24’ ಸಂಭ್ರಮವು ಗಣರಾಜ್ಯೋತ್ಸವದ ದಿನದಂದು ನಗರ ಹೊರವಲಯದ ಅಡ್ಯಾರ್ ಸಮೀಪದ ಅಡ್ಯಾರ್ ಹಿಲ್ಸ್‌ನಲ್ಲಿ ನಡೆಯಿತು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಎಂ.ಎಂ.ಶರೀಫ್ ಪಾಣೆಮಂಗಳೂರು (ವೈದ್ಯಕೀಯ), ಎಂ.ಎಚ್. ಇಕ್ಬಾಲ್ (ಉದ್ಯಮ), ಬಿ. ಮುಹಮ್ಮದ್ ತುಂಬೆ (ಶಿಕ್ಷಣ), ಪಿ. ಮುಹಮ್ಮದ್ ಪಾಣೆಮಂಗಳೂರು (ಮಾನವೀಯ ಸೇವೆ) ಅವರನ್ನು ಮುಲಾಕಾತ್ ಗೌರವ ನೀಡಿ ಪುರಸ್ಕರಿಸಲಾಯಿತು.
ಮುಖ್ಯ ಅತಿಥಿಯಾಗಿ ಎಂ.ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎನ್‌ಆರ್‌ಸಿಸಿ ಮಾಜಿ ಅಮೀರ್ ಫಾರೂಕ್ ಜುಬೈಲ್, ಚಾಮರಾಜನಗರ ಪೊಲೀಸ್ ಉಪ ನಿರೀಕ್ಷಕಿ ಯಾಸ್ಮಿನ್ ತಾಜ್ ಭಾಗವಹಿಸಿದ್ದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಕ್ಕೆ ಆಜೀವ ಸದಸ್ಯರಾಗಿ ನೂತನವಾಗಿ ಸೇರ್ಪಡೆಗೊಂಡ ಇಮ್ತಿಯಾಝ್ ಗೋಳ್ತ ಮಜಲು, ರಫೀಕ್ ಹಾಜಿ ಸುರಿಬೈಲು, ಸಯ್ಯದ್ ಝಹೂರ್ ಕಾವಳಕಟ್ಟೆ, ಇರ್ಶಾದ್ ತುಂಬೆ, ಕರೀಮ್ ಸಜಿಪ, ರಿಯಾಝ್ ಫರಂಗಿಪೇಟೆ, ಇಕ್ಬಾಲ್ ಶೀತಲ್ ವಿಟ್ಲ, ಇಬ್ರಾಹಿಂ ಮೊಯ್ದಿನ್ ನಂದಾವರ, ಅಶ್ರಫ್ ಸಾಲೆತ್ತೂರು ಅವರನ್ನು ಅಭಿನಂದಿಸಲಾಯಿತು.
ಉಪ್ಪಳ ಇಶಲ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆ ಯಿತು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ಸಂಯೋಜಿಸಿದರು. ತಾಹಿರಾ ವಿ.ಎಚ್. ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು. ಹಕೀಮ್ ಕಲಾಯಿ, ಆಶಿಕ್ ಕುಕ್ಕಾಜೆ, ಉಬೈದ್ ವಿಟ್ಲ, ಸುಲೈಮಾನ್ ಸೂರಿಕುಮೇರು, ಮುಸ್ತಫಾ ಗೋಳ್ತಮಜಲು, ಅಬೂಬಕರ್ ನೋಟರಿ, ಅಬೂಬಕರ್ ಪುತ್ತು ಉಪ್ಪಿನಂಗಡಿ, ಶೇಖ್ ರಹ್ಮತುಲ್ಲಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.







