ಜೆಬಿಎಫ್ ಕಂಪೆನಿಗೆ ಭೂಮಿ ಕೊಟ್ಟು ನಿರ್ವಸಿತರಾದವರಿಗೆ ಉದ್ಯೋಗಕ್ಕೆ ಆಗ್ರಹ: ಫೆ.26ರಂದು ಪ್ರತಿಭಟನೆ

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝೆಡ್) ಸಾಮ್ಯದಲ್ಲಿರುವ ಜಿಎಂಪಿಎಲ್ ಸಂಸ್ಥೆಯಲ್ಲಿ ಖಾಯಂ ಉದ್ಯೋಗಕ್ಕಾಗಿ 30 ದಿನಗಳಿಂದ ಎಸ್‌ಇಝಡ್‌ನ ವಠಾರದಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗಿ ದ್ದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ನಮ್ಮ ಶಾಂತಿಯುತ ಧರಣಿ ಸತ್ಯಾಗ್ರಹದ ಮುಂದುವರಿದ ಭಾಗವಾಗಿ ನಮ್ಮ ಸ್ಥಳೀಯ ಮುಖಂಡರುಗಳನ್ನು, ಸಂಘ ಸಂಸ್ಥೆಗಳನ್ನು, ಸಾರ್ವಜನಿಕರನ್ನು ಸೇರಿಸಿಕೊಂಡು ಫೆ.26 ಬೆಳಗ್ಗೆ 7 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರಿಸಲಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ನಾವು ಎಂಎಸ್‌ಇಝೆಡ್ ಸಾಮ್ಯದಲ್ಲಿರುವ ಜೆಬಿಎಫ್ ಕಂಪೆನಿಯಲ್ಲಿ 8 ವರ್ಷಗಳ ಕಾಲ ಖಾಯಂ ಉದ್ಯೋಗಿಗಳಾಗಿದ್ದೇವು. 2020ರಲ್ಲಿ ಆರ್ಥಿಕ ತೊಂದರೆಯಿಂದ ಈ ಕಂಪೆನಿ ಮುಚ್ಚಲ್ಪಟ್ಟು, ಬಳಿಕ 2023ರಲ್ಲಿ ಗೇಲ್ ಇಂಡಿಯಾ(GAIL INDIA) ದವರು ಈ ಕಂಪೆನಿಯನ್ನು ಖರೀದಿಸಿದ್ದರು. ಜೆಬಿಎಫ್‌ನಲ್ಲಿ ಖಾಯಂ ಉದ್ಯೋಗಿಗಳಾಗಿ ನೆಲೆ ಕಳೆದುಕೊಂಡಿರುವ ನಮಗೆ ಜಿಎಂಪಿಎಫ್‌ನಲ್ಲಿ ಖಾಯಂ ಉದ್ಯೋಗ ನೀಡಲು ಒಂದು ವರ್ಷದಿಂದ ಹಿಂದೇಟು ಹಾಕಲಾಗುತ್ತಿದೆ. ಹಲವು ಬಾರಿ ಕಂಪೆನಿಯವರನ್ನು ಸಂಪರ್ಕಿಸಿದಾಗಲು ಸರಿಯಾದ ಸ್ಪಂದನೆ ನೀಡಿರುವುದಿಲ್ಲ. ಇದರಿಂದ ಮನನೊಂದು ನಾವು ಪ್ರತಿಭಟನೆಯ ಹಾದಿ ಹಿಡಿದ್ದೇವೆ. ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝೆಡ್) ಸಾಮ್ಯದಲ್ಲಿರುವ ಜಿಎಂಪಿಎಲ್ (ಜೆಬಿಎಫ್) ಕಂಪೆನಿಗೆ ಭೂಮಿ ನೀಡಿ ನಿರ್ವಸಿತರಾಗಿರುವ ಕುಟುಂಬಗಳ ಪೈಕಿ ನಿರ್ವಸಿತ ಮಂದಿ ಖಾಯಂ ಉದ್ಯೋಗಕ್ಕಾಗಿ ಆಗ್ರಹಿಸಿದ್ದಾರೆ.







