ಮಂಗಳೂರು: ಜ.26ರಂದು ಜಮೀಯತುಲ್ ಫಲಾಹ್ ನಲ್ಲಿ ರಕ್ತದಾನ ಶಿಬಿರ, ಪ್ರಬಂಧ ಸ್ಪರ್ಧೆ, ಬಹುಮಾನ ವಿತರಣಾ ಕಾರ್ಯಕ್ರಮ

ಮಂಗಳೂರು: ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಜ.26ರಂದು ರಕ್ತದಾನ ಶಿಬಿರ ಮತ್ತು ಪ್ರಬಂಧ ಸ್ಪರ್ಧೆ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
AIPIF, ದ ಮೆಸೇಜ್ ಆಫ್ ಹ್ಯುಮಾನಿಟೀ ಫೋರಂ ಮಂಗಳೂರು, ಜಮೀಯತುಲ್ ಫಲಾಹ್ ಮಂಗಳೂರು ತಾಲೂಕು ಘಟಕ, ಬ್ಲಡ್ ಡೋನರ್ಸ್ ಮಂಗಳೂರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ಲೇಖಕ ಎಂ ಜಿ ಹೆಗ್ಡೆ, ಜಮೀಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ ಕೆ, ಮಂಗಳೂರಿನ ಪಿಎ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮುಹಮ್ಮದ್ ಮುಬೀನ್, ಮಂಗಳೂರಿನ ಇಖ್ರಾ ಅರೇಬಿಕ್ ಸ್ಕೂಲ್ ಪ್ರಾಂಶುಪಾಲರಾದ ಮೌಲಾನಾ ಸಾಲಿಮ್ ನದ್ವಿ, AIPIF ಮಂಗಳೂರು ಘಟಕದ ಮುಹಮ್ಮದ್ ಫರ್ಹಾನ್ ನದ್ವಿ ಭಾಗವಹಿಸಲಿದ್ದಾರೆ.
ರಕ್ತದಾನ ಶಿಬಿರವು ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





