ಮಂಗಳೂರು: ಜು.27ರವರೆಗೆ ಮಲಬಾರ್ ಗೋಲ್ಡ್‌ನಲ್ಲಿ ʼಬ್ರೈಡಲ್ ಜ್ಯುವೆಲ್ಲರಿʼ ಪ್ರದರ್ಶನ

ಮಂಗಳೂರು: ನಗರದ ಪಳ್ನೀರ್‌ನಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ʼಬ್ರೈಡಲ್ ಜ್ಯುವೆಲ್ಲರಿʼ ಪ್ರದರ್ಶನ ಶನಿವಾರ ಆರಂಭಗೊಂಡಿದೆ. ಜು.27ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಸಾಜಿದಾ ಹಾರಿಸ್ ಮತ್ತು ಯೋಗ ತರಬೇತುದಾರೆ ಮಧುಮತಿ ಕೆ. ಶೆಟ್ಟಿ ಱಬ್ರೈಡಲ್ ಜ್ಯುವೆಲ್ಲರಿೞ ಪ್ರದರ್ಶನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಮಲಬಾರ್ ಗೋಲ್ಡ್ ಮಂಗಳೂರು ಶಾಖೆಯ ಮುಖ್ಯಸ್ಥ ಶರತ್‌ಚಂದ್ರನ್, ಶೋರೂಮ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮ್ಯಾನೇಜರ್ ಗಿರೀಶ್ ರೈ, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್ ಉಪಸ್ಥಿತರಿದ್ದರು.
ಬ್ರೈಡಲ್ ಜ್ಯುವೆಲ್ಲರಿ ಸಂಗ್ರಹದಲ್ಲಿ ಉಂಗುರದಿಂದ ಹಿಡಿದು ವಧುವಿನ ಆಕರ್ಷಕ ಸೆಟ್‌ಗಳು ಇವೆ. ಎಲ್ಲಾ ಚಿನ್ನಾಭರಣಗಳ ತಯಾರಿಕೆಯ ಶುಲ್ಕದ ಮೇಲೆ ಶೇ.30ರಷ್ಟು ರಿಯಾಯಿತಿ ಇದೆ.ವಜ್ರದ ಮೇಲೆ ಶೇ.30 ರಷ್ಟು ರಿಯಾಯಿತಿ ಇದೆ. ಇದರೊಂದಿಗೆ ಪಾರಂಪರಿಕ ಆಭರಣಗಳು, ಡಿವೈನ್ ಆಭರಣಗಳು, ವಜ್ರದ ಆಭರಣ ಬ್ರಾಂಡ್ ಮೈನ್, ಅನ್‌ಕಟ್ ಡೈಮಂಡ್ ಆಭರಣಗಳಿವೆ. ಎಲ್ಲಾ ಆಭರಣಗಳಿಗೆ ಒಂದು ವರ್ಷದ ವಿಮೆ, ಚಿನ್ನದ ವಿನಿಯಮಕ್ಕೆ ಶೂನ್ಯ ಕಡಿತ ಮತ್ತು ಮರುಖರೀದಿ ಗ್ಯಾರಂಟಿಯನ್ನು ನೀಡುತ್ತದೆ ಎಂದು ಪ್ರಕಟನೆ ತಿಳಿಸಿದೆ.







