ಎಸ್‌ವೈಎಸ್ 30ನೇ ವಾರ್ಷಿಕ ಸಮ್ಮೇಳನ ಪ್ರಯುಕ್ತ ‘ಆ್ಯಕ್ಷನ್-24’ ಕಾರ್ಯಕ್ರಮ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ರಾಜ್ಯ ಮಟ್ಟದ ಮಹಾ ಸಮ್ಮೇಳನದ ಪ್ರಚಾರಾರ್ಥ ‘ಆ್ಯಕ್ಷನ್-24’ ಕಾರ್ಯಕ್ರಮವು ಪಾಣೆಮಂಗಳೂರು ಎಸ್‌ಎಸ್ ಆಡಿಟೋರಿಯಂನಲ್ಲಿ ನಡೆಯಿತು.
ಎಸ್‌ವೈಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದರು. ಸಮಿತಿಯ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ವಿಷಯ ಮಂಡಿಸಿದರು. ಎಸ್‌ವೈಎಸ್ ರಾಜ್ಯ ನಾಯಕ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಮುಖ್ಯಭಾಷಣ ಮಾಡಿದರು.
ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಕತರ್, ಅಬ್ದುಲ್ ಲತೀಫ್ ಮಾಸ್ಟರ್ ಮಾತನಾಡಿ ದರು. ಎಸ್‌ವೈಎಸ್ ನಾಯಕರಾದ ಬಶೀರ್ ಮದನಿ ಅಲ್‌ಕಾಮಿಲಿ, ಹಂಝ ಮದನಿ ತೆಂಕಕಾರಂದೂರು, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಖಾಲಿದ್ ಹಾಜಿ ಭಟ್ಕಳ, ನವಾಝ್ ಸಖಾಫಿ ಅಡ್ಯಾರ್, ಸಲೀಂ ಕನ್ಯಾಡಿ, ಬಶೀರ್ ಸಖಾಫಿ ಉಳ್ಳಾಲ, ಮಜೀದ್ ಸಖಾಫಿ ಅಮ್ಮುಂಜೆ, ರಝಾಕ್ ಭಾರತ್, ಎಸ್ಸೆಸ್ಸೆಫ್ ನಾಯಕರಾದ ಮುಹಮ್ಮದ್ ಮಿಸ್ಬಾಹಿ ಮರ್ದಾಳ, ಇರ್ಷಾದ್ ಹಾಜಿ ಗೂಡನಬಳಿ, ರಶೀದ್ ಹಾಜಿ ವಗ್ಗ ಪಾಲ್ಗೊಂಡಿದ್ದರು.
ದ.ಕ. ಜಿಲ್ಲಾ ವ್ಯಾಪ್ತಿಯ ಹದಿಮೂರು ರೆನ್‌ಗಳ ಪ್ರಚಾರ ಸಮಿತಿಯನ್ನು ರಚಿಸಲಾಯಿತು. ಪ್ರಚಾರ ಸಮಿತಿಯ ಮಹಬೂಬ್ ಸಖಾಫಿ ಸ್ವಾಗತಿಸಿದರು. ಸಲೀಂ ಕನ್ಯಾಡಿ ವಂದಿಸಿದರು.





