ಸ್ಮಾರ್ಟ್ ಸಿಟಿ ವಾಟರ್‌ಫ್ರೆಂಟ್ ಕಾಮಗಾರಿ: ಜ.31ರಂದು ಸಾರ್ವಜನಿಕ ಸಭೆ
ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ನೇತ್ರಾವತಿ ರೈಲ್ವೆ ಸೇತುವೆಯಿಂದ ಬೋಳಾರ ಸೀ ಫೇಸ್ ವರೆಗಿನ ಜಲಾಭಿಮುಖ ವಾಯುವಿಹಾರ ಅಭಿವೃದ್ಧಿ (waterfront prommende development) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ಹಾಗೂ ವಿವರಣೆ ನೀಡಲು ಜನವರಿ 31ರಂದು ಸಂಜೆ 5.30ಕ್ಕೆ ನಗರದ ಮಂಗಳಾದೇವಿ ಕಾಂತಿ ಚರ್ಚ್ ಹಾಲ್‌ನಲ್ಲಿ ಸಭೆ ನಡೆಯಲಿದೆ.
ಆಸಕ್ತ ಸಾರ್ವಜನಿಕರು ಆಗಮಿಸಬಹುದು ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





