ಮೇ 31ರಂದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್

ಮಂಗಳೂರು, ಮೇ 29: ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ವತಿಯಿಂದ ಮೇ 31ರಂದು ಸಂಸ್ಥೆಯ ಆವರಣದಲ್ಲಿ ನಿಟ್ಟೆ 'ಕ್ರಿಯೇಟಿವಿಟಿ ಫೆಸ್ಟಿವಲ್' ಆಯೋಜಿಸಲಾಗಿದೆ.
ನಗರದ ಪ್ರೆಸ್ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿಟ್ಟೆ ಕಮ್ಯುನಿಕೇಶನ್ ಮುಖ್ಯಸ್ಥ ಪ್ರೊ.ರವಿರಾಜ್, ಕಾರ್ಯಕ್ರಮದ ಅಂಗವಾಗಿ ಕೊಗ್ಗಾ ಭಾಸ್ಕರ್ ಕಾಮತ್ ಮತ್ತು ತಂಡದಿಂದ ಯಕ್ಷಗಾನ ಬೊಂಬೆ ಪ್ರದರ್ಶನ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಪೆಂಗ್ವಿನ್ ಇಂಡಿಯದ ಸಂಪಾದಕ ಕಾರ್ತಿಕ್ ವೆಂಕಟೇಶ್, ಜಿಯೋ ಸಿನೆಮಾ ಉಪಾಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್, ಸಂಗೀತ ಸಂಯೋಜಕ ರಿತ್ವಿಕ್ ಕಾಯ್ಕಿಣಿ, ಕೇದಿಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಮತಾ ರೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಗುರು ಚಂಡೆ ಸೆಟ್ ಮತ್ತು ಆದ್ಯಾ ವಿಜಯನ್ ಅವರಿಂದ ಚಂಡೆ ಮತ್ತು ಪಿಟೀಲು ಜುಗಲ್ ಬಂದಿಯೂ ನಡೆಯಲಿದೆ. ಶಿವಮೊಗ್ಗದ ವಿನ್ಯಾಸ ಹ್ಯಾಂಡ್ ಲೂಮ್ಸ್ ಸಹಯೋಗದಲ್ಲಿ ಕೈಮಗ್ಗ ಸೀರೆಗಳು, ವಸ್ತುಗಳು ಮತ್ತು ರೆಡಿಮೇಡ್ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಯೋಜಕರಾದ ಅಸ್ಮಿತಾ ವಿ., ಅನುಪಮಾ ರತೀಶ್, ಜೂಡಿ ಶರೀನ್ ಫೇಬರ್ ಉಪಸ್ಥಿತರಿದ್ದರು.





