ಉಜಿರೆ: ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ ಖಾತೆಯಿಂದ 3.14 ಲಕ್ಷ ರೂ. ಅಪಹರಣ

ಬೆಳ್ತಂಗಡಿ; ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ 3.14 ಲಕ್ಷ ರೂ. ಅಪಹರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ಬಿ.ಎನ್.ವೈ ಎಸ್ ಕಾಲೇಜಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಪ್ರದೀಪ್ ಸುರೇಶ್ ರೂಗಿ ಹಣ ಕಳೆದುಕೊಂಡವರು.
ಇವರ ಊರಾದ ಗುಲ್ಬರ್ಗ ಜಿಲ್ಲೆಯ ಅಫ್ಝಲ್ ಪುರದ ಯೂನಿಯನ್ ಬ್ಯಾಂಕಿನ ಖಾತೆಯಿಂದ ಹಣ ಅಪಹರಿಸಲಾಗಿದೆ.
ಮೇ 23ರವರೆಗೆ ಇವರ ಖಾತೆಯಲ್ಲಿ ಹಣವಿತ್ತು. ರಾತ್ರಿ 8.30ರ ಬಳಿಕ ಇವರ ಮೊಬೈಲ್ ಗೆ ಎಸ್. ಎಂ.ಎಸ್.ಗಳು ಬಂದಿದ್ದು, ಒಟಿಪಿ ಬಂದಿದೆ. ಇದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಬೆಳಗ್ಗೆ ಪರಿಶೀಲಿಸಿದಾಗ ಅವರ ಖಾತೆಯಲ್ಲಿದ್ದ 3,14,000 ರೂ. ಯಾವುದೋ ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಗೊಂಡಿರುವುದು ಕಂಡುಬಂದಿದೆ ಎಂದು ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





