ರೋಟರಿ 3181 ಜಿಲ್ಲೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು: ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಪ್ರಾಯೋಜತ್ವದಲ್ಲಿ ರೋಟರಿ ಜಿಲ್ಲಾ 3181 ಆಡಳಿತ ಸಮಿತಿಯ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ‘‘ಪ್ರಶಸ್ತಿ’’ಯು ನಗರದ ಹೊರ ವಲಯದ ಪಿಲಿಕುಲ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ರವಿವಾರ ನಡೆಯಿತು.
ಈ ಸಂದರ್ಭದಲ್ಲಿ ಹವ್ಯಾಸಿ ಪತ್ರಕರ್ತ ವಸಂತ್ ಮಲ್ಯ ಅವರಿಗೆ ರೋಟರಿ ಜಿಲ್ಲಾ ಆಡಳಿತ ಸಂಸ್ಥೆಯ ವಾರ್ಷಿಕ ವಿಶೇಷ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ರೋಟರಿ ಮಾಜಿ ಗವರ್ನರ್ ಡಾ. ದೇವದಾಸ್ ರೈ ಸನ್ಮಾನದ ವಿಧಿವಿಧಾನವನ್ನು ನೆರವೇರಿಸಿ ಮಲ್ಯರ ಅನುಪಮ ಸೇವೆ ಮತ್ತು ರೋಟರಿ ಸಂಸ್ಥೆಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ರೋಟರಿ ಗವರ್ನರ್ ವಿಕ್ರಮ್ ದತ್ತ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಅರವಿಂದ್ ಭಟ್, ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಕುಡ್ಲಮೊಗರು ಮತ್ತು ರೋಟರಿ ಇನ್ನರ್ ವಿಲ್ ಸಂಸ್ಥೆಯ ಅದ್ಯಕ್ಷೆ ವೈಶಾಲಿ ಕುಡ್ವ ಮತ್ತು ಬಬಿತಾ ರೋಹಿನಾಥ್ ಉಪಸ್ಥಿತರಿದ್ದರು.
ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆಯ 89 ಕ್ಲಬ್‌ನ 800 ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.





