ಕೆ.ಐ.ಸಿ 4ನೇ ಸನದುದಾನ ಮಹಾ ಸಮ್ಮೇಳನ: ಸಾಹಿತ್ಯ ಪುರವಣಿ ಬಿಡುಗಡೆ

ಪುತ್ತೂರು: ಕೆ.ಐ.ಸಿ ನಾಲ್ಕನೇ ಸನದುದಾನದ ಮಹಾ ಸಮ್ಮೇಳನದ ಅಂಗವಾಗಿ ಇಂದು ನಡೆದ ಫಿಕ್ಹ್ ಸೆಮಿನಾರ್ ಗೆ ಸಭಾಪತಿ ಯುಟಿ ಖಾದರ್ ರವರು ಆಗಮಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ರಚಿಸಿದ ಸಾಹಿತ್ಯ ಪುರವಣಿಗೆಯನ್ನು ಅವರು ಬಿಡುಗಡೆಗೊಳಿಸಿದರು.
ರಾಷ್ಟ್ರದ ಆಸ್ತಿಯಾಗಿ ಸಮನ್ವಯ ಶಿಕ್ಷಣದ ಕ್ರಾಂತಿಗೆ ಕೆ.ಐ.ಸಿ ಸಂಸ್ಥೆಯು ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮುದಾಯಕ್ಕೆ ಸಮರ್ಪಿಸಿದೆ ಎಂದು ಯುಟಿ ಖಾದರ್ ರವರು ಸಂಸ್ಥೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಹಲವಾರು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.
ಜ್ಞಾನ ಸಂಪನ್ನವಾದ ಫಿಕ್ಹ್ ಸೆಮಿನಾರ್
ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೆ.ಐ.ಸಿ ಕುಂಬ್ರ ಇದರ ೪ ನೇ ಸನದುದಾನ ಮಹಾ ಸಮ್ಮೇಳನದ ಅಂಗವಾಗಿ ಇಂದು ನಡೆದ ಫಿಕ್ಹ್ ಸೆಮಿನಾರ್ ಅರಿವಿನ ಆಂದೋಲನಕ್ಕೆ ಸಾಕ್ಷಿಯಾಯಿತು. ಜೀವನದ ಅವಿಭಾಜ್ಯ ಅಂಗವಾಗಿ ಫಿಕ್ಹ್ ಶಾಸ್ತ್ರವು ಮೊದಲ ಸ್ಥಾನ ಪಡೆಯಬೇಕು ಎಂದು ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿ ಉಸ್ತಾದರು ಮುಖ್ಯ ಮಾತನ್ನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಕೆ.ಪಿ ಅಹ್ಮದ್ ಹಾಜಿ ಆಕರ್ಷನ್ ಧ್ವಜಾರೋಹಣ ನೆರವೇರಿಸುವ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ದುಆ ಆಶಿರ್ವಚನ ಸಂಸ್ಥೆಯ ಮುದರ್ರಿಸ್ಸಾದ ಇಸ್ಮಾಯಿಲ್ ಮದನಿ ಹಾಗೂ ಸ್ವಾಗತ ಭಾಷಣವನ್ನು ಸಿರಾಜುದ್ದೀನ್ ಫೈಝಿ ಬಪ್ಪಲಿಗೆ, ಉದ್ಘಾಟನಾ ಭಾಷಣ ಅಬೂಬಕ್ಕರ್ ಮದನಿ ಉಸ್ತಾದರು ನೆರವೇರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿಯೂ ಸಮಸ್ತ ಮುಶಾವರ ಸದಸ್ಯರು ಆದ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿ, ಕೆ.ಸಿ ಮಹಮ್ಮದ್ ಬಾಖವಿ ಪ್ರೊಫೆಸರ್ ದಾರುಲ್ ಹುದಾ ಇಸ್ಲಾಮಿಕ್ ಯೂನಿವರ್ಸಿಟಿ ಚೆಮ್ಮಾಡ್ ಹಾಗೂ ಜಾಫರ್ ಹುದವಿ ಎಚ್ ಒಡಿ ಆಫ್ ಫೈನಾನ್ಸ್ ದಾರುಲ್ ಹುದಾ ಇಸ್ಲಾಮಿಕ್ ಯೂನಿವರ್ಸಿಟಿ ಚೆಮ್ಮಾಡ್ ರವರು ಈ ಸಂದರ್ಭ ಮಾತನಾಡಿದರು.







