ವೈದ್ಯಕೀಯ ವೃತ್ತಿಯ ಆಮಿಷವೊಡ್ಡಿ 4.20 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಂಗಳೂರು, ಜು.5: ದುಬೈಯ ಎನ್‌ಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿಯ ಆಮಿಷವೊಡ್ಡಿ 4,20,062 ರೂ. ವಂಚಿಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗೀತ ಎಂಬಾಕೆ ತನ್ನ ಮೊಬೈಲ್‌ಗೆ ಕರೆ ಮಾಡಿ ದುಬೈಯಲ್ಲಿ ವೈದ್ಯಕೀಯ ವೃತ್ತಿ ಇದೆ. ಅದರ ಮಾಹಿತಿ ಯನ್ನು ಇ ಮೇಲ್ ಮೂಲಕ ಕಳುಹಿಸುವೆ ಎನ್ನುತ್ತಾ ತನ್ನ ಇಮೇಲ್‌ಗೆ ಹುದ್ದೆ ಮತ್ತು ಸಂಬಳದ ಬಗ್ಗೆ ವಿವರ ನೀಡಿದ್ದರು. ಬಳಿಕ ವಿನಯ ಸಿಂಗ್ ಎಂಬಾತ ಕರೆ ಮಾಡಿ ಉದ್ಯೋಗದ ಆಸಕ್ತಿ ಇದ್ದರೆ ನೋಂದಣಿ ಶುಲ್ಕ 5,499 ರೂ. ಪಾವತಿಸುವಂತೆ ತಿಳಿಸಿದ್ದ. ಜೂ.13ರಂದು ಕೆನರಾ ಬ್ಯಾಂಕ್ ಖಾತೆಯಿಂದ ಹಣ ಕಳುಹಿ ಸಿದ್ದೆ. ಜೂ.16ರಂದು ಪ್ರೊಫೈಲ್ ವೆರಿಫಿಕೇಶನ್ ಫೀಸ್ ಎಂದು 25,960 ರೂ., ಜೂ.21ರಂದು 50 ಸಾವಿರ ರೂ., 23ರಂದು 50 ಸಾವಿರ ರೂ. ಮತ್ತು 4,002 ರೂ., 24ರಂದು 2,001ರಂತೆ ಕೆನರಾ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದೆ. ಜೂ.17ರಂದು ಡಿಎಚ್‌ಎ ಲೈಸೆನ್ಸ್ ಎಂದು 82,600 ರೂ., 21ರಂದು 75 ಸಾವಿರ ಮತ್ತು 25 ಸಾವಿರ ರೂ., 24ರಂದು ಎನ್‌ಒಸಿ ಪಾರ್ಟ್ 1 ಮತ್ತು 2 ಎಂದು ಹೇಳಿ 50 ಸಾವಿರ ರೂ., ಮತ್ತು 50 ಸಾವಿರ ರೂ.ಗಳಂತೆ ಕಳುಹಿಸಿದ್ದೆ. ಬಳಿಕ 2,62,000 ರೂ. ವರ್ಗಾಯಿಸಲು ತಿಳಿಸಿದ್ದ. ಆವಾಗ ತನಗೆ ಅನುಮಾನ ಉಂಟಾಗಿ ಸ್ನೇಹಿತರ ಬಳಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.