ಬಜ್ಪೆ: ಅಕ್ರಮ ಮರಳುಗಾರಿಕೆ ಆರೋಪ; 5 ದೋಣಿ ವಶಕ್ಕೆ

ಸಾಂದರ್ಭಿಕ ಚಿತ್ರ
ಬಜ್ಪೆ: ಅಡ್ಡೂರು ಗ್ರಾಮದ ಕೆಳಗಿನ ಕೆರೆ ಎಂಬಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಅನಧಿಕೃತವಾಗಿ ಮರಳುಗಾರಿಕೆ ನಡೆ ಸುತ್ತಿದ್ದ ಪ್ರದೇಶಕ್ಕೆ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ದಾಳಿ ಮಾಡಿ 5 ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಫಲ್ಗುಣಿ ನದಿಯಿಂದ ಕಳ್ಳತನ ಮಾಡುತ್ತಿರುವ ಆರೋಪದಲ್ಲಿ ಭೂವಿಜ್ಞಾನಿ ಡಾ. ಮಹದೇಶ್ವರ್ ಎಚ್.ಎಸ್ ಅವರ ಕಚೇರಿಗೆ ಲಿಖಿತ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಉಪ ನಿರ್ದೇಶಕರು ಮತ್ತು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಅವರು ನದಿಗೆ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಸ್ಥಳ ಮಹಜರು ನಡೆಸಿದಾಗ ಮರಳು ಎತ್ತಲು ಉಪಯೋಗಿಸುತ್ತಿದ್ದ 5 ಕಬ್ಬಿಣದ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭೂವಿಜ್ಞಾನಿ ಡಾ. ಮಹದೇಶ್ವರ್ ಎಚ್.ಎಸ್ ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
Next Story





